ETV Bharat / state

ವೈಟಿಪಿಎಸ್​​ ಖಾಸಗಿಯವರಿಗೆ ವಹಿಸಲು ಚಿಂತನೆ: ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ - raichur news

ರಾಜ್ಯ ಸರ್ಕಾರ ವೈಟಿಪಿಎಸ್​ ಅನ್ನು ಮ್ಯಾಕ್ ಕಂಪನಿಗೆ ವಹಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದನ್ನು ಸಿಪಿಐ (ಎಂಎಲ್) ಪಕ್ಷ ತೀವ್ರವಾಗಿ ಖಂಡಿಸಿದೆ. ಅಲ್ಲದೇ ಸರ್ಕಾರ ವೈಟಿಪಿಎಸ್​​ನ ಖಾಸಗೀಕರಣ ಮಾಡುವುದನ್ನ ಕೈಬೀಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ
ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ
author img

By

Published : May 15, 2020, 5:44 PM IST

ರಾಯಚೂರು: ಯರಮರಸ್ ಸೂಪರ್ ಕ್ರಿಟಿಕಲ್ ಪವರ್ ಸ್ಟೇಷನ್ (ವೈಟಿಪಿಎಸ್) ನನ್ನು ಖಾಸಗಿ ಕಂಪನಿಗೆ ಗುತ್ತಿಗೆ ನೀಡುವುದಕ್ಕೆ ಮುಂದಾಗಿರುವ ಸರ್ಕಾರದ ಕ್ರಮವನ್ನ ಸಿಪಿಐ (ಎಂಲ್) ರಾಯಚೂರು ಜಿಲ್ಲಾ ಸಮಿತಿ‌ ತೀವ್ರವಾಗಿ ಖಂಡಿಸಿದೆ.

ವೈಟಿಪಿಎಸ್​​ ಖಾಸಗಿಯವರಿಗೆ ವಹಿಸಲು ಚಿಂತನೆ

ನಗರದ ಪ್ರತಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೈದರಾಬಾದ್‌ನ ಪವರ್ ಮ್ಯಾಕ್ ಕಂಪನಿಗೆ ನೀಡಲು ಮುಂದಾಗಿತ್ತು. ಆಗ ಸಿಪಿಐ (ಎಂಎಲ್) ಪಕ್ಷ ತೀವ್ರವಾಗಿ ಖಂಡಿಸುವ ಮೂಲಕ ಹೋರಾಟವನ್ನ ನಡೆಸಿತ್ತು. ಅಲ್ಲದೇ ಕಾರ್ಮಿಕರ ಸಂಘಟನೆಗಳು, ಭೂ ಸಂತ್ರಸ್ತರು ವಿರೋಧ ವ್ಯಕ್ತಪಡಿಸಿದರು. ಆಗ ಸರ್ಕಾರ ಖಾಸಗಿ ಕಂಪನಿ ನೀಡುವುದನ್ನ ಕೈಬಿಟ್ಟಿತ್ತು. ಆದರೆ ಪುನಃ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ವೈಟಿಪಿಎಸ್​ ಅನ್ನ ಪರವ್ ಮ್ಯಾಕ್ ಕಂಪನಿಗೆ ನೀಡಲು ಮುಂದಾಗಿದೆ.

ಇದರಿಂದ ವೈಟಿಪಿಎಸ್‌ ಭೂಸಂತ್ರಸ್ತರಿಗೆ, ಸ್ಥಳೀಯ ಕಾರ್ಮಿಕರಿಗೆ, ವೈಟಿಪಿಎಸ್ ಕಾರ್ಯ ನಿರ್ವಹಿಸುವವರಿಗೆ ತೊಂದರೆಯಾಗಲಿದೆ. ಹೀಗಾಗಿ ಸರ್ಕಾರ ವೈಟಿಪಿಎಸ್​​ನ ಖಾಸಗೀಕರಣ ಮಾಡುವುದನ್ನ ಕೂಡಲೇ ಕೈಬೀಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.