ರಾಯಚೂರು: ಮನೆಯ ಬೀಗ ಮುರಿದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಸೆರೆ ಹಿಡಿಯುವಲ್ಲಿ ಸಿಂಧನೂರು ನಗರ ಠಾಣೆ ಪೊಲೀಸರು ಯಶ್ವಸಿಯಾಗಿದ್ದಾರೆ.
ಮಹಾಂತೇಶ ಬಳ್ಳೊಳ್ಳಿ ಎಂಬ ಆರೋಪಿಯನ್ನು ಬಂಧಿಸಿರುವ ಪೊಲೀಸರು 1.58ಲಕ್ಷ ರೂಪಾಯಿ ಮೌಲ್ಯದ 82 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಜಿಲ್ಲೆಯ ಸಿಂಧನೂರು ನಗರದ ಬಡಿಬೇಸ್ ಬಡಾವಣೆ ನಿವಾಸಿ ಮಂಜುಳಾ ವೀರೇಶ್ ಎಂಬುವರ ಮನೆಯಲ್ಲಿ ಕಳೆದ ಅ.15ರಂದು ಮನೆಯ ಬೀಗ ಮುರಿದು ಒಂಬತ್ತೂವರೆ ತೊಲ ಚಿನ್ನಾಭರಣ ಹಾಗೂ 10 ಸಾವಿರ ರೂಪಾಯಿ ನಗದು ದೋಚಿ ಕಳ್ಳ ಪರಾರಿಯಾಗಿದ್ದಾನೆ. ಈ ಕುರಿತಂತೆ ಮಂಜುಳಾ ಸಿಂಧನೂರು ನಗರ ಠಾಣೆಗೆ ದೂರು ನೀಡಿದ್ರು. ದೂರಿನ ಆಧಾರದ ಮೇಲೆ ಸಿಂಧನೂರು ನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಖದೀಮನನ್ನು ಸೆರೆ ಹಿಡಿಯುವಲ್ಲಿ ಯಶ್ವಸಿಯಾಗಿದ್ದಾರೆ.