ETV Bharat / state

ರಾಯಚೂರು ಅಗ್ನಿಶಾಮಕ ಸಿಬ್ಬಂದಿಗೆ ನೀರಿಗಿಂತ ರಸ್ತೆಗಳದ್ದೇ ಸಮಸ್ಯೆ: ತುರ್ತು ಸೇವೆಗೆ ಬೇಕಿದೆ ದಾರಿಗಳ ಅಭಿವೃದ್ಧಿ

ಜಿಲ್ಲೆಯ ಅಗ್ನಿಶಾಮಕ ಠಾಣೆಗಳಲ್ಲಿ ನೀರಿನ ಕೊರತೆಯಿಲ್ಲ. ಬದಲಾಗಿ ಹಾಳಾದ ರಸ್ತೆಗಳಿಂದ ಘಟನಾ ಸ್ಥಳಕ್ಕೆ ನಿಗದಿತ ಸಮಯಕ್ಕೆ ತೆರಳಲು ಕಷ್ಟವಾಗುತ್ತಿದೆ. ಹಾಗಾಗಿ ಕೂಡಲೇ ರಸ್ತೆ ಸರಿಪಡಿಸುವತ್ತ ಸರ್ಕಾರ ಗಮನ ಹರಿಸಬೇಕಾಗಿದೆ.

There is no water problem in Raichur fire stations
ರಾಯಚೂರು ಅಗ್ನಿಶಾಮಕ ಠಾಣೆಗಳಲ್ಲಿ ನೀರಿನ ಕೊರತೆಯಿಲ್ಲ - ಹದಗೆಟ್ಟ ರಸ್ತೆಗಳೇ ಅಡ್ಡಿ!
author img

By

Published : Mar 30, 2021, 7:29 PM IST

ರಾಯಚೂರು: ಅಗ್ನಿ ಅವಘಡಗಳು ಸಂಭವಿಸಿದಾಗ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಿಯಂತ್ರಿಸುತ್ತಾರೆ. ಬೆಂಕಿ ನಂದಿಸಲು ಅಗ್ನಿಶಾಮಕ ಇಲಾಖೆಗೆ ಮುಖ್ಯವಾಗಿ ಅಗತ್ಯಕ್ಕೆ ಅನುಗುಣವಾಗಿ ನೀರಿನ ಸಂಗ್ರಹವಿರಬೇಕು. ರಾಯಚೂರು ಜಿಲ್ಲೆಯಲ್ಲಿರುವ ಅಗ್ನಿಶಾಮಕ ಠಾಣೆಗಳಿಗೆ ನೀರಿನ ಲಭ್ಯತೆಯಲ್ಲಿ ಯಾವುದೇ ಕೊರತೆಯಿಲ್ಲ. ಆದ್ರೆ ನಿಗದಿತ ಅವಧಿಯಲ್ಲಿ ಘಟನಾ ಸ್ಥಳಕ್ಕೆ ತಲುಪಲು ಹದಗೆಟ್ಟ ರಸ್ತೆಗಳೇ ಅಡ್ಡಿಯಾಗಿವೆ.

ಅಗ್ನಿಶಾಮಕ ಠಾಣೆಗಳಲ್ಲಿ ನೀರಿನ ಕೊರತೆಯಿಲ್ಲ

6 ಅಗ್ನಿಶಾಮಕ ಠಾಣೆಗಳಲ್ಲಿ ನೀರು ಸಂಗ್ರಹ:

ಜಿಲ್ಲೆಯ ಮಾನವಿ, ಸಿಂಧನೂರು, ಮಸ್ಕಿ, ಲಿಂಗಸೂಗೂರು, ದೇವದುರ್ಗ, ಸಿರವಾರ ಹಾಗೂ ರಾಯಚೂರು ಸೇರಿ ಒಟ್ಟು 07 ತಾಲೂಕುಗಳಿವೆ. 7 ತಾಲೂಕುಗಳ ಪೈಕಿ 6 ಅಗ್ನಿಶಾಮಕ ಠಾಣೆಗಳಿವೆ. ಈ ಅಗ್ನಿಶಾಮಕ ಠಾಣೆಗಳು ಒಂದು ಬೋರ್​ವೆಲ್ ಹಾಗೂ 50 ಸಾವಿರ ಲೀಟರ್ ಮೇಲ್ಪಟ್ಟ ನೀರು ಸಂಗ್ರಹಿಸಿಡಬಹುದಾದ ಅಂಡರ್ ಗ್ರೌಂಡ್​​ ಟ್ಯಾಂಕ್​ ವ್ಯವಸ್ಥೆಯನ್ನು ಹೊಂದಿದೆ.

ನೀರಿನ ಕೊರತೆಯಿಲ್ಲ:

ಹಾಗಾಗಿ ಫೈಯರ್ ಸ್ಟೇಷನ್​​ಗಳಲ್ಲಿ ನೀರಿನ ಕೊರತೆಯಿಲ್ಲ. ಆದ್ರೆ ಅಗ್ನಿ ಅನಾಹುತ ಸಂಭವಿಸಿದಾಗ ಮಾತ್ರ ಆ ಪ್ರದೇಶಕ್ಕೆ ತೆರಳಲು ಸೂಕ್ತ ರಸ್ತೆಗಳಿಲ್ಲ. ಜಿಲ್ಲೆಯಲ್ಲಿ ನಾನಾ ರಸ್ತೆಗಳು ಸರಿಯಾಗದೆ ಇರುವುದರಿಂದ ತುರ್ತಾಗಿ ಘಟನಾ ಸ್ಥಳಕ್ಕೆ ತಲಪುಲು ಕಷ್ಟಸಾಧ್ಯವಾಗುತ್ತದೆ ಎನ್ನುತ್ತವೆ ಇಲಾಖೆಯ ಮೂಲಗಳು.

ಬಣವೆಗೆ ಬೆಂಕಿ ಹತ್ತುವ ಪ್ರಕರಣಗಳೇ ಹೆಚ್ಚು:

ಜಿಲ್ಲೆಯ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಬಣವೆಗೆ ಬೆಂಕಿ ಹತ್ತುವ ಪ್ರಕರಣಗಳು ಕಂಡುಬರುತ್ತವೆ. ಜಾನುವಾರುಗಾಗಿ ಸಂಗ್ರಹಿಸುವ ಮೇವಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲುವುದು, ಕಾಟನ್ ಮಿಲ್​ಗಳಲ್ಲಿ ಸಹ ಆಗಾಗ್ಗೆ ಬೆಂಕಿ ಅನಾಹುತಗಳು ಸಂಭವಿಸುತ್ತವೆ.

ಹೆಚ್ಚು ನೀರಿನ ಅವಶ್ಯಕತೆಯಿದ್ದರೆ?

ನೀರಾವರಿ ಪ್ರದೇಶ ಹೊಂದಿರುವ ಸಿಂಧನೂರು ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆಯಿದ್ದು, ಮೇವಿನ ಬಣವೆಗೆ ಬೆಂಕಿ ತಗುಲಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ಕರೆ ಬಂದ ಕೂಡಲೇ ಠಾಣೆಯಲ್ಲಿ ನೀರಿನ ಸಂಗ್ರಹವಿರುವುದರಿಂದ ತುರ್ತಾಗಿ ಸ್ಥಳಕ್ಕೆ ತೆರಳಿ ಅಗ್ನಿ ನಂದಿಸುವ ಕೆಲಸ ಮಾಡಲಾಗುತ್ತದೆ. ಹೆಚ್ಚಿನ ನೀರಿನ ಅವಶ್ಯಕತೆಯಿದ್ದರೆ, ಸ್ಥಳೀಯವಾಗಿರುವ ಪಂಪ್ ಸೆಟ್, ಕೆರೆ, ಕಾಲುವೆ ಮೂಲಕ ನೀರು ತೆಗೆದುಕೊಂಡು ಹೋಗಿ ಬೆಂಕಿ ನಂದಿಸುವ ಕೆಲಸ ಮಾಡಲಾಗುತ್ತದೆ.

ಹದಗೆಟ್ಟ ರಸ್ತೆಗಳಿಂದಲೇ ಸಮಸ್ಯೆ:

ಅಗ್ನಿ ಸಂಬಂಧಿತ ಕರೆ ಬಂದಾಗಿ ತುರ್ತಾಗಿ ಸ್ಥಳವನ್ನು ತಲುಪಬೇಕಾದ ಅವಶ್ಯಕತೆಯಿದೆ. 30 ಕಿ.ಮೀ. ಅಂತರ ಅದಕ್ಕೂ ಅಧಿಕ ಅಂತರದ ಸ್ಥಳ ತಲುಪುವಾಗ ಸ್ವಲ್ಪ ಸಮಯ ಬೇಕಾಗುತ್ತದೆ. ಅಲ್ಲದೇ ರಸ್ತೆಗಳು ಹಾಳಾಗಿರುವುದರಿಂದ ನಿಗದಿತ ಸಮಯಕ್ಕೆ ದೌಡಾಯಿಸಲು ತೊಂದರೆಯಾಗುತ್ತಿದೆ.

ಅಗ್ನಿ ಅವಘಡ ಸಂಬಂಧಿತ ಬಂದ ಕರೆಗಳೆಷ್ಟು?

2020ರಲ್ಲಿ ಒಟ್ಟು 766 ಕರೆಗಳು ಅಗ್ನಿಶಾಮಕ ಇಲಾಖೆಗಳಿವೆ ಬಂದಿವೆ. 2021 ಅಂದರೆ ಇಲ್ಲಿಯವರೆ 205 ಕರೆಗಳು ಬಂದಿವೆ. ಈ ಎಲ್ಲಾ ಕರೆಗಳಿಗೆ ಅಗ್ನಿಶಾಮಕ ಇಲಾಖೆ ಸ್ಪಂದಿಸಿವೆ. ಇನ್ನೂ 2 ಸುಳ್ಳು ಕರೆಗಳು ಸಹ ಬಂದಿವೆ.

ಇದನ್ನೂ ಓದಿ: ಗಣಿ ಜಿಲ್ಲೆಗೆ 10 ಸಾಕಾಗ್ತಿಲ್ಲ, ಇನ್ನೂ 2 ಅಗ್ನಿ ಶಾಮಕ ಠಾಣೆ ಸ್ಥಾಪನೆಗೆ ಪ್ರಸ್ತಾವನೆ

ಜಿಲ್ಲೆಯ 7 ತಾಲೂಕುಗಳ ಪೈಕಿ 6 ಅಗ್ನಿಶಾಮಕ ಠಾಣೆಗಳು ಇರುವುದರಿಂದ ಸಿರವಾರ, ಮಸ್ಕಿ ತಾಲೂಕು ಕೇಂದ್ರದಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಬೇಕಾಗಿದ್ದು, ಹಟ್ಟಿ ಪಟ್ಟಣ ಸೇರಿದಂತೆ ಇನ್ನೂ 4 ನಾಲ್ಕು ಠಾಣೆಗಳ ಸ್ಥಾಪನೆಗಾಗಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.

ಅಗ್ನಿಶಾಮಕ ವಾಹನಗಳು ನಿಗದಿತ ಅವಧಿಯೊಳಗೆ ಘಟನಾ ಸ್ಥಳಿಗೆ ತೆರಳಲು ರಸ್ತೆಗಳನ್ನು ಅಭಿವೃದ್ಧಿಪಡಿಸಿದರೆ, ಅನಾಹುತಗಳನ್ನು ತುರ್ತಾಗಿ ನಿಯಂತ್ರಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.