ETV Bharat / state

ಪ್ರಸ್ತುತ ವರ್ಷದ ಕಿಸಾನ್ ಸಮ್ಮಾನ್ ಯೋಜನೆ ಪ್ರಾರಂಭ: ಆರ್.ವೆಂಕಟೇಶ್​ ಕುಮಾರ್​

ಪ್ರಸ್ತುತ ವರ್ಷದ ಕಿಸಾನ್ ಸಮ್ಮಾನ್ ಯೋಜನೆ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ 2 ಲಕ್ಷದ 13 ಸಾವಿರ ರೈತರು ‌ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್​ ಕುಮಾರ್​ ತಿಳಿಸಿದರು.

author img

By

Published : Feb 7, 2020, 3:08 PM IST

venkatesh kumar
ಆರ್.ವೆಂಕಟೇಶ್​ ಕುಮಾರ್​ ಸುದ್ದಿಗೋಷ್ಠಿ

ರಾಯಚೂರು: ಪ್ರಸ್ತುತ ವರ್ಷದ ಕಿಸಾನ್ ಸಮ್ಮಾನ್ ಯೋಜನೆ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ 2 ಲಕ್ಷದ 13 ಸಾವಿರ ರೈತರು ‌ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್​ ಕುಮಾರ್​ ತಿಳಿಸಿದರು.

ಆರ್.ವೆಂಕಟೇಶ್​ ಕುಮಾರ್​ ಸುದ್ದಿಗೋಷ್ಠಿ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2018-19 ನೇ ಸಾಲಿನಲ್ಲಿ ಮಾರ್ಚ್ ವರೆಗೆ 1 ಲಕ್ಷದ 97 ಸಾವಿರ ರೈತರ ಖಾತೆಗೆ ಹಣ ಜಮಾ ಆಗಿದೆ. 2019-20 ನೇ ಸಾಲಿನಲ್ಲಿ ಮೊದಲ ಕಂತಿನಲ್ಲಿ 1 ಲಕ್ಷದ 48 ಸಾವಿರ ರೈತರಿಗೆ ‌ಹಣ ಜಮಾ ಆಗಿದೆ. ಎರಡನೇ ಕಂತಿನಲ್ಲಿ 1 ಲಕ್ಷದ 24 ಸಾವಿರ ರೈತರಿಗೆ ಹಣ ಜಮಾ ಆಗಿದೆ ಎಂದು ತಿಳಿಸಿದರು.

ಇನ್ನು ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ಕೆಲ ರೈತರಿಗೆ ಹಣ ಜಮಾ ‌ಆಗಿಲ್ಲ, ಈ ಸಮಸ್ಯೆ ಸರಿಪಡಿಸಿ ಕ್ರಮ ಕೈಗೊಳ್ಳಲಾಗುವುದು. ಸದರಿ ಯೋಜನೆಗೆ ಈಗ ರಾಜ್ಯ ಸರ್ಕಾರದಿಂದ ಪ್ರತಿ ‌ರೈತರಿಗೆ 4 ಸಾವಿರದಂತೆ ಒಟ್ಟು 50 ಕೋಟಿ ರೂ. ನೀಡಲಾಗಿದೆ ಎಂದು ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.