ETV Bharat / state

ಹೆಚ್‌ಡಿಕೆ ಭೂ ಹಗರಣವನ್ನು ಸಂಪೂರ್ಣ ಬಹಿರಂಗ ಪಡಿಸುವೆ.. ಎಸ್ ಆರ್ ಹಿರೇಮಠ ಗುಡುಗು - SR Hiramath

ಕಾಫಿ ಡೇ ಹಗರಣದ ಕುರಿತು ಸಿಬಿಐ ನಿವೃತ್ತ ಡಿಐಜಿ ಅಶೋಕ ಮಲಹೋತ್ರ ವರದಿ ನೀಡಿದ್ದಾರೆ. ವರದಿಯಲ್ಲಿ ಹಲವು ಭ್ರಷ್ಟರ, ಭ್ರಷ್ಟತನದ ಉಲ್ಲೇಖವಿಲ್ಲ. ಡಿಕೆಶಿ, ಮಾಳವಿಕ ಹೆಗಡೆ ಸೇರಿ ಅನೇಕರು ಸಾರ್ವಜನಿಕರ ಹಣವನ್ನು ಕೊಳ್ಳೆ ಹೂಡೆದಿದ್ದಾರೆ..

SR Hiramath
ಎಸ್.ಆರ್.ಹಿರೇಮಠ
author img

By

Published : Dec 2, 2020, 4:11 PM IST

ರಾಯಚೂರು : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ದೊಡ್ಡ ಭೂಗಳ್ಳನಾಗಿದ್ದಾನೆ. ಒಂದು ತಿಂಗಳಲ್ಲಿ ಹೆಚ್‌ಡಿಕೆ ಭೂ ಹಗರಣ ಸಂಪೂರ್ಣ ಬಹಿರಂಗ ಪಡಿಸುವುದಾಗಿ ಸಿಟಿಜನ್ ಫಾರ್ ಡೆಮಾಕ್ರಸಿ ಅಧ್ಯಕ್ಷ ಎಸ್ ಆರ್ ಹಿರೇಮಠ ಗುಡುಗಿದ್ದಾರೆ.

ಹೆಚ್‌ಡಿಕೆ ವಿರುದ್ಧ ದಾಖಲೆ ಬಿಡುಗಡೆಗೊಳಿಸ್ತಾರಂತೆ ಎಸ್ ಆರ್ ಹಿರೇಮಠ..

ನಗರದ ಪ್ರತಿಕಾ ಭವನದಲ್ಲಿ ಮಾತನಾಡಿದ ಅವರು, ರಾಮನಗರ ಕೇತಗಾನಹಳ್ಳಿ ಪರಿಶಿಷ್ಟ ಜಾತಿಗೆ ಸೇರಿದ 200 ಎಕರೆ, 65 ಎಕರೆ ಗೋಮಾಳ ಕಬಳಿಕೆ ಮಾಡಿದ್ದಾರೆ. ಈ ಬಗ್ಗೆ ಶ್ರೀಘದಲ್ಲೇ ಹಗರಣವನ್ನು ತಾತ್ವಿಕ ಹಂತಕ್ಕೆ ಕೊಂಡೊಯ್ಯಲಾಗುವುದು. ಮಾದೇಗೌಡರು, ಹೆಚ್ ಡಿ ಕುಮಾರಸ್ವಾಮಿ ಭೂ ಕಬಳಿಕೆ ಬಗ್ಗೆ ಹೇಳಿದ್ದರು. ಲೋಕಾಯುಕ್ತ ಮೆಟ್ಟಿಲು ಏರಿದರೂ, ಹೈಕೋರ್ಟ್ ಸೂಚಿಸಿದ್ದರೂ ಸರ್ಕಾರ ಕ್ರಮಕೈಗೊಂಡಿಲ್ಲ ಎಂದರು.

ಮಾಜಿ ಸಿಎಂ ಎಸ್‌ ಎಂ ಕೃಷ್ಣ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಅಕ್ರಮ ಹಣದಿಂದ ಕಾಫಿ ಡೇಯನ್ನು ಎಂಟರ್​​ಪ್ರೈಸಸ್ ಮಾಡಿದ್ದಾರೆ. ಕೇಂದ್ರ ಸರ್ಕಾರದ ಕಾರ್ಪೊರೇಟ್ ಅಫೇರ್ಸ್ ಎಸ್‌ಎಫ್ಒಐನಿಂದ ಸತ್ಯಂ ಕಂಪನಿಯ ಮೇಲೆ ತನಿಖೆಯಾಗಬೇಕು. ಎಸ್ ಎಂ ಕೃಷ್ಣಾ ವಿರುದ್ಧ ಎಫ್‌ಐಆರ್ ದಾಖಲಿಸಬೇಕಾಗಿದ್ದು, ಅವರು ಕ್ರಿಮಿನಲ್ ಅಕಾಡೆಮಿಯನ್ನು ಮಾಡಿಕೊಂಡಿದ್ದಾರೆ.

ಕಾಫಿ ಡೇ ಮಾಲೀಕ ಸಿದ್ದಾರ್ಥ ಆತ್ಮಹತ್ಯೆ ಮಾಡಿಕೊಂಡಿರುವುದು ಅನುಮಾನವಿದೆ. ಕೊಲೆಯಾಗಿದೆಯೋ ಏನ್ಆಗಿದೆಯೋ ಎಂಬುವುದರ ಬಗ್ಗೆ ಇಷ್ಟರಲ್ಲಿ ಬಯಲಿಗೆ ಬೀಳಲಿದೆ. ಎಸ್‌ ಎಂ ಕೃಷ್ಣ ಮಾಹಾ ಭ್ರಷ್ಟನಾಗಿದ್ದು, ಅವರ ಕ್ಯಾಬಿನೆಟ್‌ನಲ್ಲಿದ್ದ ಡಿ ಕೆ ಶಿವುಕುಮಾರ್​, ಕೋತ್ವಾಲ್ ರಾಮಚಂದ್ರರಿಗೆ ಚಹ ಕೊಡುತ್ತಿದ್ದ ಎಂದು ದೂರಿದರು.

ಡಿ ಕೆ ಶಿವಕುಮಾರ್​ ವಿರುದ್ಧ ಅಕ್ರಮ ಆಸ್ತಿಯ ದೂರು ನೀಡಿದ ಹಿನ್ನೆಲೆ ತನಿಖೆಯಾಗುತ್ತಿದೆ. ಈತನ ಗುರು ಎಸ್ ಎಂ ಕೃಷ್ಣರ ವಿರುದ್ಧ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಕಾಫಿ ಡೇ ಹಗರಣದ ಕುರಿತು ಸಿಬಿಐ ನಿವೃತ್ತ ಡಿಐಜಿ ಅಶೋಕ ಮಲಹೋತ್ರ ವರದಿ ನೀಡಿದ್ದಾರೆ. ವರದಿಯಲ್ಲಿ ಹಲವು ಭ್ರಷ್ಟರ, ಭ್ರಷ್ಟತನದ ಉಲ್ಲೇಖವಿಲ್ಲ. ಡಿಕೆಶಿ, ಮಾಳವಿಕ ಹೆಗಡೆ ಸೇರಿ ಅನೇಕರು ಸಾರ್ವಜನಿಕರ ಹಣವನ್ನು ಕೊಳ್ಳೆ ಹೂಡೆದಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕಾಗಿತ್ತು. ಆದ್ರೆ, ತನಿಖೆ ನಡೆದಿಲ್ಲ . ನಿವೃತ್ತ ರಾಜ್ಯ ಮುಖ್ಯಕಾರ್ಯದರ್ಶಿ ಎಸ್ ವಿ ರಂಗನಾಥ ಕಾಫಿ ಡೇ ಚೇರ್ಮನ್ ಆಗಿದ್ದಾರೆ. ರಂಗನಾಥ ಎಷ್ಟು ಪ್ರಾಮಾಣಿಕರೋ ಗೊತ್ತಿಲ್ಲ. ತನಿಖೆ ಸರಿಯಾಗಿ ನಡೆಯುವಂತೆ ಮಾಡುವುದು ಅವರ ಜವಾಬ್ದಾರಿಯಾಗಿದೆ ಎಂದರು.

ಮಾಜಿ ಸಿಎಂ ಎಸ್ ಎಂ ಕೃಷ್ಣ ಕ್ರಿಮಿನಲ್‌ಗಳನ್ನು ಬೆಳೆಸಿದ್ದಕ್ಕೆ ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಬೇಕು. ತಮ್ಮ ಅಪರಾಧಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಸೇರಿದ್ದಾರಾ? ಬಹಿರಂಗ ಪಡಿಸಲು ಹೊರಗೆಡೆ ಬಂದು ಹೇಳಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.