ETV Bharat / state

'ಬರ'ಬೇಡಾ ಅಂದ್ರೂ ಕೇಳಲಿಲ್ಲ.. ಬೇರೆ ದಾರಿ ಇಲ್ದೇ, ರಾತ್ರೋರಾತ್ರಿ ಗಂಟುಮೂಟೆ ಕಟ್ಟಿ ಗುಳೆ ಹೊಂಟೇವ್ರೀ..

ಏನ್‌ ಮಾಡೋದ್ರೀ ಸಾಹೇಬ್ರಾ, ದುಡಿಯಬೇಕು. ಆಗಲೇ ನಾವ್ ತಿನ್ನೋಕಾಗೋದು. ಆದರೆ, ಮಳೆ ಇಲ್ಲದೇ ಏನ್ ಮಾಡೋದ್ರೀ ಕೆಲಸ ಇಲ್ಲ. ಹೊಟ್ಟೆಪಾಡು ನೋಡ್ರೀ ಅದಕ್ಕಾಗೇ ಗುಳೆ ಹೊರಟೇವ್ರೀ ಅಂತಿದ್ದಾರೆ ಬಿಸಿಲೂರಿನ ಜನ.

author img

By

Published : Apr 29, 2019, 12:01 AM IST

ಹಳ್ಳಿ ಬಿಟ್ಟು ಪಟ್ಟಣದತ್ತ ಗುಳೆ ಹೊರಟ ರೈತಾಪಿ ಜನ

ರಾಯಚೂರು : ಈ ಜನ ವ್ಯವಸಾಯವನ್ನೇ ನಂಬಿ ಬದುಕು ಕಟ್ಟಿಕೊಂಡವರು. ಆದರೆ, ಕೃಷಿ ಮಾಡಬೇೆಕೆಂದರೂ ಮಳೆ ಕೈಕೊಟ್ಟಿದೆ. ಪರಿಣಾಮ ಬೆಳೆಯಿಲ್ಲದೆ ಭೀಕರ ಬರದ ಛಾಯೆ ಇಡೀ ಜಿಲ್ಲೆಯನ್ನೇ ಆವರಿಸಿದೆ. ಇಂಥ ಪರಿಸ್ಥಿತಿಯಲ್ಲಿ ನಾಲ್ಕಾರು ಕಾಸು ಸಂಪಾದನೆಗೋಸ್ಕರ ಅವರೆಲ್ಲಾ ರಾಜಧಾನಿಯತ್ತ ಗುಳೆ ಹೊರಟಿದ್ದಾರೆ.

ಗಂಟು ಮೂಟೆ ಕಟ್ಟಿ ಜನ ಹಳ್ಳಿ ಬಿಟ್ಟು ದೂರದೂರಿಗೆ ಹೊರಟು ನಿಂತಿದ್ದಾರೆ. ಮಕ್ಕಳ ಜೊತೆ ಅಸಹಾಯಕರಾಗಿ ಕುಳಿತಿರುವ ಮಂದಿ. ಇಲ್ಲೊಬ್ಬರು ಈ ಬಸ್ ಎಲ್ಲಿಗೋಗುತ್ತಪ್ಪಾ ಎಂದು ಕೇಳುತ್ತಿರುವ ಪಾಡು. ಇವೆಲ್ಲಾ ವರುಣನ ಅವಕೃಪೆಯಿಂದ ಉಂಟಾದ ದಯನೀಯ ಪರಿಸ್ಥಿತಿಯ ದೃಶ್ಯ.

ಹಳ್ಳಿಯಲ್ಲಿ ಮಳೆ ಬರ್ತಿಲ್ಲ, ಮಳೆ ಬಾರದೇ ಇದ್ದರೆ ಕೃಷಿ ನಂಬಿ ಬದುಕೋದು ಹೇಗೆ ಅನ್ನೋ ಚಿಂತೆ. ಬಡಜೀವಗಳು ಪೇಟೆ, ಪಟ್ಟಣಗಳಲ್ಲಿ ಕೂಲಿನಾಲಿ ಮಾಡಿಯಾದ್ರೂ ಜೀವನ ಸಾಗಿಸೋಕೆ ಹೊರಟು ಹೋಗುತ್ತಿದ್ದಾರೆ. ಇದು ರೈತನ ಒಪ್ಪೊತ್ತಿನ ಊಟದ ಬವಣೆ, ಸಂಕಟ. ಇದು ಬಿಸಿಲೂರು ರಾಯಚೂರಿನ ಚಿತ್ರಣ.

ಇವರೆಲ್ಲಾ ಕೃಷಿ ಚಟುವಟಿಕೆಗಳಲ್ಲಿ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದವರು. ಆದರೆ, ಮಳೆ ಇದ್ದರೆ ತಾನೇ ಕೃಷಿ ? ಹಾಗಾಗಿ ಅನಿವಾರ್ಯವಾಗಿ ಜನರು ತಂಡೋಪತಂಡವಾಗಿ ನಗರಗಳಿಗೆ ವಲಸೆ ಹೋಗುವ ದುಸ್ಥಿತಿ ಎದುರಾಗಿದೆ. ಹಿರಿಜೀವಗಳನ್ನು ಮನೆಯಲ್ಲೇ ಬಿಟ್ಟು ಮಕ್ಕಳ ಜೊತೆ ರಾತ್ರೋರಾತ್ರಿ ಮಹಾನಗರಗಳಿಗೆ ತೆರಳುತ್ತಿದ್ದಾರೆ.

ಬರಗಾಲದ ಹಿನ್ನೆಲೆಯಲ್ಲಿ ನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ವಿಪರ್ಯಾಸ ನೋಡಿ. ಈ ಯೋಜನೆಯಡಿ ಕೆಲಸ ಮಾಡಿದ್ರೂ, ಕೂಲಿ ಹಣ ಸರಿಯಾಗಿ ಪಾವತಿಯಾಗಲ್ವಂತೆ. ಇಂಥಾ ಯೋಜನೆಯಿಂದ ನಮ್ಮಂಥ ಬಡವರಿಗೆ ಲಾಭವಿಲ್ಲ. ಅವೆಲ್ಲಾ ಅಧಿಕಾರಿಗಳು, ರಾಜಕೀಯ ನಾಯಕರ ಜೇಬು ತುಂಬಿಸುತ್ತವೆ ಅಂತಾರೆ ಜನ.

ಜನ ಕೆಲಸಕ್ಕಾಗಿ ಹಳ್ಳಿ ಬಿಟ್ಟು ಪಟ್ಟಣದ ಕಡೆ ಮುಖ ಮಾಡಿ ಗುಳೆ ಹೋಗುತ್ತಿದ್ದರೂ ಜನಪ್ರತಿನಿಧಿಗಳು ಅವರಿಗೆ ಸಮಾಧಾನ ಹೇಳುವ ಗೋಜಿಗೆ ಹೋಗಿಲ್ಲ. ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಂಡು ಜನಸಾಮಾನ್ಯರ ನೆರವಿಗೆ ಧಾವಿಸಬೇಕಿದೆ.

Intro:Body:

ರಾಯಚೂರು: ಅಲ್ಲಿನ ಜನರು ವ್ಯವಸಾಯವನ್ನೇ ನಂಬಿ ಬದುಕು ಕಟ್ಟಿಕೊಂಡವರು. ಆದ್ರೆ, ಕೃಷಿಗೆ ಅಮೃತದಂತಿರುವ ಮಳೆ ಕೈಕೊಟ್ಟಿದೆ. ಪರಿಣಾಮ ಬೆಳೆಯಿಲ್ಲದೆ ಭೀಕರ ಬರದ ಛಾಯೆ ಇಡೀ ಜಿಲ್ಲೆಯನ್ನೇ ಆವರಿಸಿದೆ. ಇಂಥ ಪರಿಸ್ಥಿತಿಯಲ್ಲಿ ನಾಲ್ಕಾಸು ಸಂಪಾದನೆಗೋಸ್ಕರ ಅವರೆಲ್ಲಾ ರಾಜಧಾನಿಯತ್ತ ಗುಳೇ ಹೊರಟಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.