ETV Bharat / state

ನಾಲೆಯಲ್ಲಿ ಬಿದ್ದು ನಾಪತ್ತೆಯಾದ ಬಾಲಕನ ಶವ ಪತ್ತೆ.. - ಕಾಣೆಯಾಗಿದ್ದ ಬಾಲಕನ ಶವ ಪತ್ತೆ ಸುದ್ದಿ

ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..

raichur
ಬಾಲಕನ ಶವ ಪತ್ತೆ
author img

By

Published : Jan 3, 2021, 12:41 PM IST

ರಾಯಚೂರು : ನಾರಾಯಣಪುರ ಬಲದಂಡೆ ನಾಲೆಯಲ್ಲಿ ಕಾಲು ಜಾರಿ ಬಿದ್ದು ಕಾಣೆಯಾಗಿದ್ದ ಬಾಲಕನ ಶವ ಪತ್ತೆಯಾಗಿದೆ.

ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಾಳಾಪುರ ಗ್ರಾಮದ ಬಳಿಯ‌ ಕಾಲುವೆಗೆ ಬಟ್ಟೆ ತೊಳೆಯಲು ತಾಯಿ, ಮಗು ತೆರಳಿದ್ದರು‌. ಈ ವೇಳೆ ಕಾಳಾಪುರ ಗ್ರಾಮದ ಬಸವರಾಜ್​​ (6) ಎಂಬ ಬಾಲಕ ಕಾಲು ಜಾರಿ ನಾಲೆಯಲ್ಲಿ ಬಿದ್ದು ನಾಪತ್ತೆಯಾಗಿದ್ದ.

ಪೋಷಕರ ದೂರಿನ ಮೇಲೆ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಬಾಲಕನ ಪತ್ತೆ ಕಾರ್ಯ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಇದೀಗ ನಾಲ್ಕೈದು ದಿನ ಕಳೆದ ಬಳಿಕ ಪೂಲಭಾವಿ ಗ್ರಾಮದ ನಾಲೆಯ ಬಳಿ ಬಾಲಕನ ಶವ ಪತ್ತೆಯಾಗಿದೆ.

ಓದಿ: ಕಾರಿನಲ್ಲಿ ಪತ್ರಕರ್ತ ಶವವಾಗಿ ಪತ್ತೆ : ಕತ್ತು ಹಿಸುಕಿ ಕೊಲೆಗೈದ ಶಂಕೆ

ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.