ETV Bharat / state

ರಾಯಚೂರಲ್ಲಿ ತೆಲಂಗಾಣ ರೈತರ ಪ್ರತಿಭಟನೆ: ಪೊಲೀಸರೊಂದಿಗೆ ವಾಗ್ವಾದ

author img

By

Published : Jun 24, 2021, 3:49 PM IST

ರಾಜ್ಯದ ಗಡಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾದ ತೆಲಂಗಾಣ ರೈತರನ್ನು ಪೊಲೀಸರು ತಡೆದಿದ್ದು, ಇದರಿಂದ ಆಕ್ರೋಶಗೊಂಡ ಅವರು ವಾಗ್ವಾದ ನಡೆಸಿದ್ದಾರೆ.

http://10.10.50.85//karnataka/24-June-2021/kn-rcr-03-telangana-farmers-protest-vis-ka10035_24062021142713_2406f_1624525033_30.jpeg

ರಾಯಚೂರು: ರಾಜ್ಯದ ಗಡಿಯಲ್ಲಿ ತೆಲಂಗಾಣದ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಆಂಧ್ರ ಸರ್ಕಾರ ರಾಜೋಳ್ಳಿಬಂಡಾ ಬಲದಂಡೆ ವ್ಯಾಪ್ತಿಯಲ್ಲಿ ನೂತನ ಏತ ನೀರಾವರಿ ಯೋಜನೆ ರೂಪಿಸಿದ್ದು, ಇದನ್ನು ವಿರೋಧಿಸಿ ಅಲಂಪುರ ಮಾಜಿ ಶಾಸಕ ಸಂಪತ್ ಕುಮಾರ್ ನೇತೃತ್ವದಲ್ಲಿ 200 ಕ್ಕೂ ಹೆಚ್ಚು ರೈತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಯೋಜನೆಯನ್ನ ವಿರೋಧಿಸಿ ರಾಜೋಳ್ಳಿ ಬಂಡಾ ಜಲಾಶಯಕ್ಕೆ ಪ್ರತಿಭಟನೆ ನಡೆಸಲು ರೈತರು ತೆರಳುತ್ತಿದ್ದರು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಜನರು ಸೇರಬಾರದೆಂದು ರಾಜ್ಯದ ಪೊಲೀಸರು ರೈತರನ್ನ ಕೊತ್ತದೊಡ್ಡಿ ಗ್ರಾಮದ ಬಳಿ ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.

ತೆಲಂಗಾಣ ರೈತರ ಪ್ರತಿಭಟನೆ

ಈ ಬಳಿಕ ಪರಿಸ್ಥಿತಿಯನ್ನ ತಿಳಿಗೊಳಿಸಿದ ಪೊಲೀಸರು ರೈತರನ್ನ ವಾಪಸ್ ಕಳುಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.