ರಾಯಚೂರು: ಆರನೇ ತರಗತಿ ಪಠ್ಯದಲ್ಲಿ ಬ್ರಾಹ್ಮಣ ಸಮುದಾಯದ ಬಗ್ಗೆ ಇಲ್ಲಸಲ್ಲದ ಅಂಶವನ್ನು ಸೇರಿಸಿದ್ದು, ಅವುಗಳನ್ನು ತೆಗೆಯಬೇಕೆಂದು ರಾಯರ ಮಠದ ಪೀಠಾಧಿಪತಿ ಶ್ರೀಸುಬುದೇಂದ್ರ ತೀರ್ಥರು ಒತ್ತಾಯಿಸಿದ್ದಾರೆ.
ಪಠ್ಯದಲ್ಲಿ ಒಂದು ಸಮುದಾಯವನ್ನು ನಿಂದಿಸುವ ಅಥವಾ ಆಪಾದಿಸುವ ಅಂಶಗಳನ್ನು ಸೇರಿಸುವುದು ಸರಿಯಲ್ಲ. ರಾಜ್ಯ ಸರ್ಕಾರ 6ನೇ ತರಗತಿ ಪಠ್ಯ ಪುಸ್ತಕದಲ್ಲಿ ಬ್ರಾಹ್ಮಣ ಸಮುದಾಯದ ಬಗ್ಗೆ ಇಲ್ಲ ಸಲ್ಲದ ಅಂಶಗಳನ್ನು ಸೇರಿಸಲಾಗಿದೆ. ಇದು ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ಅಂಶವನ್ನು ತೆಗೆಯಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಶಿಕ್ಷಣ ಸಚಿವರು ಹಾಗೂ ಸಿಎಂ ಜೊತೆಗೆ ಸಂಪರ್ಕಿಸಿ ಮಾತನಾಡಲಾಗಿದೆ. ಈಗಾಗಲೇ ಪುಸಕ್ತ ಮುದ್ರಿತವಾಗಿದೆ ಎಂದು ಹೇಳಿದ್ದರೂ ತಜ್ಞರ ಜೊತೆ ಚರ್ಚಿಸಲಾಗುವುದು ಎನ್ನುವ ಮೂಲಕ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.