ರಾಯಚೂರು: ಇಲ್ಲಿಯ ಪೂರ್ಣಿಮಾ ಟಾಕೀಸು ಬಳಿಯಿರುವ ಚರಂಡಿಯಲ್ಲಿ ವ್ಯಕ್ತಿಯ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ಮೃತಪಟ್ಟವರನ್ನು ಆಂಧ್ರದ ಗುಂತಕಲ್ ಮೂಲದ ಹರಿಕೃಷ್ಣ (30) ಎಂದು ಗುರುತಿಸಲಾಗಿದೆ. ಹರಿಕೃಷ್ಣ ಪತ್ನಿ ರಾಯಚೂರು ನಗರದ ಮ್ಯಾದರ ಬಡಾವಣೆ ನಿವಾಸಿಯಾಗಿದ್ದು, ಪತ್ನಿಗಾಗಿ ನಗರಕ್ಕೆ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ.
ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.