ರಾಯಚೂರು: ನಗರದ ಹೊರವಲಯದ ನವೋದಯ ಮೇಡಿಕಲ್ ಕಾಲೇಜಿನಲ್ಲಿ ಕ್ಲಾಸ್ ರೂಮ್‌ನಲ್ಲಿ ಪ್ರಾಧ್ಯಾಪಕರ ಮುಂದೆಯೇ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡಿದ್ದಾರೆ. ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿದ ಕಾರಣ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಓರ್ವ ವಿದ್ಯಾರ್ಥಿಗೆ ತಲೆಗೆ ಪೆಟ್ಟು ಬಿದ್ದಿದ್ದು, 12 ಹೊಲಿಗೆ ಹಾಕಲಾಗಿದೆ. ಮತ್ತೋರ್ವನ ಹಣೆಗೆ ಗಾಯವಾಗಿದೆ ಎನ್ನಲಾಗುತ್ತಿದೆ. ಶಂಕರ್ ಮತ್ತು ಶಂಬುಲಿಂಗ ಗಾಯಗೊಂಡ ವಿದ್ಯಾರ್ಥಿಗಳು. ನವೋದಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ರೋಹಿತ್ ಕಬ್ಬಿಣದ ರಾಡ್ನಿಂದ ಹಲ್ಲೆಗೈದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿ ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿಗಳು ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.
ರೋಹಿತ್ ತನ್ನ ತಾಯಿಯ ಬರ್ತ್‌ಡೇ ಫೋಟೋ ಸ್ಟೇಟಸ್ ಹಾಕಿದ್ದನ್ನು ಸಹಪಾಠಿಗಳಾದ ಶಂಕರ್ ಹಾಗೂ ಶಂಭುಲಿಂಗ ಎನ್ನುವ ವಿದ್ಯಾರ್ಥಿಗಳು ದುರ್ಬಳಕೆ ಮಾಡಿಕೊಂಡು, ಫೋಟೋ ಸ್ಕ್ರೀನ್ ಶಾಟ್ ತೆಗೆದು ಹಾರ್ಟ್ ಸಿಂಬಲ್ ಮೂಲಕ ವೈರಲ್ ಮಾಡಿದ್ದರಂತೆ. ಈ ಕಾರಣಕ್ಕೆ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ನೇತಾಜಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬಸ್ನಿಂದ ಹೊರಗೆಸೆಯಲ್ಪಟ್ಟು ವಿದ್ಯಾರ್ಥಿ ಸಾವು : ಬಸ್ ಡ್ರೈವರ್, ಕಂಡಕ್ಟರ್ ಬಂಧನ