ರಾಯಚೂರು: ಗುಲ್ಬರ್ಗ ವಿಶ್ವವಿದ್ಯಾಲಯದ ಯಡವಟ್ಟಿನಿಂದ ಉತ್ತೀರ್ಣನಾಗಬೇಕಿದ್ದ ವಿದ್ಯಾರ್ಥಿ ಕೇವಲ 05 ಅಂಕದೊಂದಿಗೆ ಫೇಲ್ ಆಗಿದ್ದಾನೆ.
ಲಿಂಗಸುಗೂರು ತಾಲೂಕಿನ ಒಳಬಳ್ಳಾರಿ ಚೆನ್ನಬಸವೇಶ್ವರ ಕಾಲೇಜಿನ 3 ನೇ ಸೆಮಿಸ್ಟರ್ ವಿದ್ಯಾರ್ಥಿ ರಸೂಲಸಾಬ ಕವಿತಾಳ 2019ರ ನವೆಂಬರ್ನಲ್ಲಿ ಪರೀಕ್ಷೆ ಬರೆದಿದ್ದ. ಫಲಿತಾಂಶ ಪ್ರಕಟವಾದ ಕನ್ನಡ ವಿಷಯದಲ್ಲಿ ಕೇವಲ 05 ಅಂಕ ಬಂದಿತ್ತು. ಬಳಿಕ ಉತ್ತರ ಪತ್ರಿಕೆಯ ನಕಲಿ ಪ್ರತಿ ತರಿಸಿಕೊಂಡು ನೋಡಿದಾಗ 50 ಅಂಕ ನಮೂದಿಸಿ ಸಹಿ ಹಾಕಲಾಗಿತ್ತು.
ಬಳಿಕ ರಸೂಲಸಾಬ ಕವಿತಾಳ ಉಪನ್ಯಾಸಕರೊಂದಿಗೆ ಚರ್ಚಿಸಿ ಹೆಚ್ಚು ಅಂಕ ಬರುವ ನಿರೀಕ್ಷೆಯಿಂದ ಮರು ಮೌಲ್ಯಮಾಪನಕ್ಕೆ ಹಾಕಿದ್ದ. ಆದರೆ, ಮರು ಮೌಲ್ಯಮಾಪನದ ಫಲಿತಾಂಶ ತಡೆಹಿಡಿಯಲಾಗಿದ್ದು, ಗಳಿಸಿದ್ದಷ್ಟು ಅಂಕ ಸಿಗದಿದ್ದರೆ ಕಾಲೇಜು ಬಿಡುವುದಾಗಿ ವಿದ್ಯಾರ್ಥಿ ಅಳಲು ತೋಡಿಕೊಂಡಿದ್ದಾನೆ.