ರಾಯಚೂರು: ಎಕ್ಸಾಂನಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್.ಎನ್.ನಗರ ಕ್ಯಾಂಪಿನಲ್ಲಿ ನಡೆದಿದೆ.
ಪ್ರಶಾಂತಿ (20) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಡಿಪ್ಲೋಮಾ ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್(ಡಿಎಂಎಲ್ಟಿ) ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದ್ರೆ ಕಳೆದ ವರ್ಷ ನಾಲ್ಕು ವಿಷಯದಲ್ಲಿ ಫೇಲ್ ಆಗಿದ್ದು, ಮರು ಪರೀಕ್ಷೆ ಬರೆದಿದ್ದಳು. ಮರು ಪರೀಕ್ಷೆಯಲ್ಲಿ ಸಹ ಮೂರು ವಿಷಯ ಫೇಲ್ ಆಗಿದ್ದಾಳಂತೆ. ಇದರಿಂದ ಮನನೊಂದು ತಮ್ಮ ಮನೆಯಲ್ಲಿ ಫೆ. 22ರಂದು ವಿಷ ಸೇವಿಸಿದ್ದಳು.
ಕೂಡಲೇ ವಿದ್ಯಾರ್ಥಿಯನ್ನು ಸಿಂಧನೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಕೊನೆಯುಸಿರು ಎಳೆದಿದ್ದಾಳೆ. ಮಗಳನ್ನ ಕಳೆದುಕೊಂಡ ಪೊಷಕರು ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಬಳಗಾನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.