ETV Bharat / state

'ಪ್ರಾದೇಶಿಕ ಪಕ್ಷಕ್ಕಿಂತಲೂ ಕಾಂಗ್ರೆಸ್‌ ಕಡೆ, ಅಡ್ರೆಸ್ ಇಲ್ಲದೆ ಹೋಗುವ ದುಸ್ಥಿತಿ ಬರಬಹುದು' - etv bharat kannada

ಕಾಂಗ್ರೆಸ್ ಪ್ರಾದೇಶಿಕ ಪಕ್ಷಕ್ಕಿಂತಲ್ಲೂ ಕಡೆ ಆಗಿದೆ. ರಾಜ್ಯದಲ್ಲಿ ಅವರು ಅಡ್ರೆಸ್ ಇಲ್ಲದೆ ಹೋಗುವ ದುಸ್ಥಿತಿ ಬರಬಹುದು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

Statement by MP B Y Raghavendra
ರಾಜ್ಯದಲ್ಲಿ ಕಾಂಗ್ರೆಸ್ ಪ್ರಾದೇಶಿಕ ಪಕ್ಷಕ್ಕಿಂತಲ್ಲೂ ಕಡೆ ಆಗಿದೆ : ಸಂಸದ ಬಿ.ವೈ ರಾಘವೇಂದ್ರ
author img

By

Published : Nov 14, 2022, 1:47 PM IST

ರಾಯಚೂರು: ಟಿಪ್ಪು ವಿಚಾರದಲ್ಲಿ ನಮ್ಮ ಪಕ್ಷದ ನಿಲುವು ಸ್ಪಷ್ಟ. ವೋಟಿಗಾಗಿ ಕೆಂಪೇಗೌಡ ಮತ್ತು ಟಿಪ್ಪು ಜೊತೆ ತುಲನೆ ಮಾಡುವುದು ಅಕ್ಷಮ್ಯ ಅಪರಾಧ. ಯಾವುದೇ ಕಾರಣಕ್ಕೂ ಈ ರೀತಿಯ ತಪ್ಪು ಮಾಡಬಾರದು. ಹಾಗೊಂದು ವೇಳೆ ಕಾಂಗ್ರೆಸ್ ಈ ತಪ್ಪು ಮಾಡಿದ್ದಲ್ಲಿ ರಾಜ್ಯದಲ್ಲಿ ಅವರು ಅಡ್ರೆಸ್ ಇಲ್ಲದೆ ಹೋಗುವ ದುಸ್ಥಿತಿ ಬರಬಹುದು. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್, ಪ್ರಾದೇಶಿಕ ಪಕ್ಷಕ್ಕಿಂತಲ್ಲೂ ಕಡೆ ಆಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಶ್ರೀಶೈಲ ಜಗದ್ಗುರು ದ್ವಾದಶ ಪೀಠಾರೋಹಣ ಮಹೋತ್ಸವದ ನಿಮಿತ್ತ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಕೆಲಸಗಳು ಆಗದೇ ಇದ್ದಾಗ ಆತಂಕ ಶುರುವಾಗುವುದು ಸಹಜ. ಅದೇ ರೀತಿ ಸಿದ್ಧರಾಮಯ್ಯನವರಿಗೂ ಆಗಿದೆ. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಂಡಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪ್ರಾದೇಶಿಕ ಪಕ್ಷಕ್ಕಿಂತಲ್ಲೂ ಕಡೆ ಆಗಿದೆ : ಸಂಸದ ಬಿ.ವೈ ರಾಘವೇಂದ್ರ

ರಾಜ್ಯ ರಾಜಕೀಯದ ಧಮ್ಮು-ತಾಕತ್ತು ವಿಚಾರವಾಗಿ ಮಾತನಾಡಿ, ತಿಂದದ್ದು ಸ್ವಲ್ಪ ಜೀರ್ಣ ಆಗದಿದ್ದಾಗ ಇಂತಹ ಪದಗಳು ಬರುತ್ತವೆ. ನಿಜವಾದ ತಾಕತ್ತು, ಧಮ್ಮು ಜನರು ತೋರಿಸುತ್ತಾರೆ. ಜನರೇ ಎಲ್ಲ ರಾಜಕಾರಣಿಗಳ ಮಾಲೀಕರು ಎಂದರು.

ಸಿದ್ದರಾಮಯ್ಯ ಕಂಡರೆ ಬಿಜೆಪಿ ನಾಯಕರಿಗೆ ಭಯವೇ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಬಗ್ಗೆ ‌ನಮಗೆ ಗೌರವವಿದೆ. ಅವರಿಗೆ ಬಿಜೆಪಿ ನಾಯಕರನ್ನು ಟೀಕೆ ಮಾಡಲಿಲ್ಲವೆಂದರೆ ಸಮಾಧಾನ ಇರುವುದಿಲ್ಲ. ಅವರ ಟೀಕೆಗೆ ನಮ್ಮ ನಾಯಕರು ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಗುಜರಾತ್ ಚುನಾವಣೆಗೆ ಕಾಂಗ್ರೆಸ್‌ ಸಿದ್ಧತೆ: ವಡ್ಗಾಮ್‌ ಕ್ಷೇತ್ರದಿಂದ ಜಿಗ್ನೇಶ್ ಮೇವಾನಿ ಕಣಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.