ರಾಯಚೂರು: ಯುವಕರಿಗೆ ಕತ್ತಿ ಹಿಡಿದು ತಮ್ಮ ಹಕ್ಕು ಪಡೆಯಲು ಪ್ರೇರೇಪಿಸದೆ ಪೆನ್ನು ಹಿಡಿದು ಸಸರ್ಕಾರದ ಸೌಲಭ್ಯ ಪಡೆಯುವಂತೆ ರೂಪಿಸಬೇಕು ಎಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಕಿವಿಮಾತು ಹೇಳಿದರು.
ನಗರದ ಹೊರವಲಯದ ಹರ್ಷಿತಾ ಗಾರ್ಡನ್ನಲ್ಲಿ ಅಖಿಲ ಕರ್ನಾಟಕ ರಾಜ್ಯ ವಾಲ್ಮಿಕಿ ನಾಯಕ ಮಹಾಸಭಾ, ರಾಜ್ಯ ವಾಲ್ಮಿಕಿ ನಾಯಕ ಮಹಿಳಾ ಹಾಗೂ ಜಿಲ್ಲಾ ಘಟಕವನ್ನ ಉದ್ದೇಶಿಸಿ ಅವರು ಮಾತನಾಡಿದರು. ಸಮಾಜದ ಮುಖಂಡರು ತಮ್ಮ ಹಕ್ಕು ಪಡೆಯಲು ಕತ್ತಿ ಹಿಡಿದರೂ ಸರಿ ಎಂದು ಹಲವೆಡೆ ಯುವಕರನ್ನು ಪ್ರೇರೇಪಿಸುವ ಬೆಳವಣಿಗೆ ಕಂಡು ಬರುತ್ತಿದೆ. ಆದರೆ ಇದು ತಪ್ಪು, ಸಂವಿಧಾನ ಎಲ್ಲರಂತೆ ನಮಗೂ ಮೀಸಲಾತಿ ಕಲ್ಪಿಸಿದೆ ಅದನ್ನು ಪಡೆಯಲು ಈಗ ಕತ್ತಿಯ ಬದಲು ಪೆನ್ನನ್ನು ಅಸ್ತ್ರವಾಗಿ ಬಳಸಬೇಕಿದೆ. ಅಂದರೆ, ಸೌಕರ್ಯಗಳನ್ನು ಶಿಕ್ಷಣದ ಮೂಲಕ ಪಡೆಯಬೆಕಿದ್ದು, ಪ್ರತಿಯೊಬ್ಬ ಮಕ್ಕಳಿಗೂ ಉನ್ನತ ಶಿಕ್ಷಣ ನೀಡಿ ಸರ್ಕಾರದ ಸೌಲಭ್ಯ ಪಡೆಯಲು ಜಾಗೃತಗೊಳಿಸುವ ಕಾರ್ಯವಾಗಬೇಕೆಂದರು.
ನಮ್ಮ ಸಮಾಜದ ಅನೇಕ ವರ್ಷಗಳ ಬೇಡಿಕೆಯಾದ ಶೇ.7.5 ರಷ್ಟು ಮೀಸಲಾತಿ ಪಡೆಯಲು ಹಲವಾರು ಹೊರಾಟಗಳು ನಡೆದಿವೆ. ಅದ್ರೂ, ರಾಜ್ಯ ಸರ್ಕಾರ ಇಂದಿಗೂ ಅಷ್ಟು ಪ್ರಮಾಣದ ಮೀಸಲಾತಿ ಕಲ್ಪಿಸಿಲ್ಲ. ಸಮಾಜದ ಅಭಿವೃದ್ಧಿ ವಿಷಯ ಬಂದಾಗ ಎಲ್ಲರೂ ಪಕ್ಷಾತೀತವಾಗಿ ಒಗ್ಗಟ್ಟಾಗಬೇಕು ಎಂದ ಅವರು ಮುಂದೆ ಈ ಟಾರ್ಗೆಟ್ ತಲುಪಲು ರಾಜಕೀಯ ಹೊರತಾಗಿಯೂ ಸಿದ್ಧ ಎಂದರು. ಅಲ್ಲದೇ ರಾಜೀನಾಮೆ ನೀಡಿಯಾದ್ರೂ ಸರಿ ಸಮಾಜದ ವಿಷಯಕ್ಕೆ ಒಂದಾಗಬೇಕೆಂದು ಹೇಳಿದರು.
ನಂತರ ಮಾತನಾಡಿದ ಮಾನ್ವಿಯ ಶಾಸಕ ರಾಜಾ ವೆಂಕಟಪ್ಪ ನಾಯಕ, ನಾವು ಶಾಸಕರಾಗಲುನಮ್ಮ ಸಮಾಜದವರೇ ಕಾರಣ. ಸಮಾಜ ಮೊದಲು ನಂತರ ಅಧಿಕಾರ ಎಂದು ಹೇಳಿದರು. ಅಷ್ಟೇ ಅಲ್ಲದೆ ರಾಜಕೀಯದಲ್ಲಿ ನಾವು ಯಾವುದೇ ಪಕ್ಷದಲ್ಲಿದ್ರೂ ಸಮಾಜದ ವಿಷಯ ಬಂದಾಗ ಒಂದಾಗಿ ಹೋರಾಡುತ್ತೇವೆ ಎಂದರು.
ಇನ್ನೂ ಇದೇ ವೇಳೆಸಮಾವೇಶದಲ್ಲಿ ರಾಜ್ಯ ಹಾಗೂ ಜಿಲ್ಲಾ ವಾಲ್ಮಿಕಿ ನಾಯಕ ಮಹಿಳಾ ಘಟಕದ ಪದಾಧಿಕಾರಿಗಳು ತಮ್ಮ ವಿಚಾರ ಮಂಡಿಸಿದರು.