ರಾಯಚೂರು: ನಗರದ ಪೊಲೀಸ್ ಕಾಲೊನಿಯ ಪರೀಕ್ಷಾ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳ ಗುರುತು ಪತ್ತೆ ಮಾಡುವಲ್ಲಿ ಗೊಂದಲ ಉಂಟಾಗಿರುವ ಘಟನೆ ನಡೆದಿದೆ.
ಮರುಪರೀಕ್ಷೆ (ರಿಪೀಟರ್ಸ್) ಬರೆಯಲು ಬಂದವರು ಮಾತ್ರ ಈ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದು, ಹಾಲ್ ಟಿಕೆಟ್ಗೆ ಶಾಲಾ ದಿನಗಳಲ್ಲಿನ ಭಾವಚಿತ್ರ ಕೊಟ್ಟಿದ್ದರಿಂದ ಸಿಬ್ಬಂದಿಯಲ್ಲಿ ಗೊಂದಲ ಉಂಟಾಯಿತು.
ಅನುಮಾನಗೊಂಡು ಪರೀಕ್ಷಾರ್ಥಿಗಳನ್ನು ವಾಪಸ್ ಕಳುಹಿಸಲು ಸಿಬ್ಬಂದಿ ಮುಂದಾಗಿದ್ದರು. ನಂತರ, ಇತರ ದಾಖಲೆಗಳನ್ನ ಪರಿಶೀಲಿಸಿದ ಬಳಿಕ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಯಿತು.