ರಾಯಚೂರು: ಜಿಲ್ಲೆಯಲ್ಲಿ ಸ್ನೇಕ್ ಪಾರ್ಕ್ ಸ್ಥಾಪಿಸುವಂತೆ ಫ್ರೆಂಡ್ಸ್ ವೈಲ್ಡ್ ಲೈಫ್ ರೆಸ್ಕ್ಯೂ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಅಫ್ಸರ್ ಹುಸೇನ್ ಒತ್ತಾಯಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಭೂಮಿಯಲ್ಲಿ ಮನುಷ್ಯರಂತೆ ಹಾವುಗಳೂ ಜೀವಿಸುತ್ತಿವೆ. ಒಂದು ವೇಳೆ ಹಾವುಗಳು ಇಲ್ಲದಿದ್ದರೆ ಮನುಷ್ಯನಿಗೂ ಭೂಮಿಯಲ್ಲಿ ವಾಸಿಸಲು ಕಷ್ಟವಾಗುತ್ತಿತ್ತು ಎಂದಿದ್ದಾರೆ.
ಜನರು ಹಾವು ಕಂಡರೆ ಹೊಡೆದು ಕೊಲ್ಲುತ್ತಾರೆ. ಆದರೆ ಹಾವುಗಳನ್ನು ಕೊಲ್ಲಬೇಡಿ. ಹಾವು ಹಿಡಿಯುವ ನೈಪುಣ್ಯ ಹೊಂದಿದವರಿಗೆ ಕರೆ ಮಾಡಿ ಹಾವು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುವ ಕೆಲಸ ಮಾಡಬೇಕು ಎಂದರು.
ಹೀಗಾಗಿ ಹಾವುಗಳ ಕುರಿತು ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳುವಳಿಕೆ ಮೂಡಿಸುವ ಜೊತೆಗೆ ಹಾವುಗಳ ಬಗ್ಗೆ ಮಾಹಿತಿ ಒದಗಿಸುವುದಕ್ಕೆ ನಗರದಲ್ಲಿ ಸ್ನೇಕ್ ಪಾರ್ಕ್ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ಇದಕ್ಕಾಗಿ ಈಗಾಗಲೇ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಗಿದ್ದು, ಇದರ ಬಗ್ಗೆ ಪರಿಶೀಲಿಸಿ ಅದಷ್ಟು ಬೇಗ ಸ್ನೇಕ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು. ರಾಯಚೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾವುಗಳು ಕಂಡುಬಂದರೆ 9900127861ಕ್ಕೆ ಕರೆ ಮಾಡಿ. ಅದನ್ನು ಹಿಡಿದು ಅರಣ್ಯಕ್ಕೆ ಬಿಡಲಾಗುವುದು ಎಂದು ತಿಳಿಸಿದರು.