ರಾಯಚೂರು: ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣೆ ಪ್ರಚಾರದ ಕಾರ್ಯಕ್ರಮದಲ್ಲಿ ಹೌದು ಹುಲಿಯಾ ಎನ್ನುವ ವಿಡಿಯೋ ಬಾರಿ ಸದ್ದು ಮಾಡಿದ್ದು, ವೈರಲ್ ಆಗಿದೆ.
ಜಿಲ್ಲೆಯ ಸಿಂಧನೂರು ತಾಲೂಕಿನ ಒಳಬಳ್ಳಾರಿ ಗ್ರಾಮದಲ್ಲಿ ಏತನೀರಾವರಿ ಯೋಜನಗೆ ಒಳಪಡುವ ಗ್ರಾಮದ ರೈತರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆ, ಅಭಿಮಾನಿಯೊಬ್ಬ ಹೌದು ಹುಲಿಯಾ ಎಂದು ಕೂಗಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹೌದು ಹುಲಿಯಾ, ಹೌದು ಹುಲಿಯಾ ಎನ್ನುವುದು ದೊಡ್ಡ ಪ್ರಮಾಣದಲ್ಲಿ ವೈರಲ್ ಆಗಿದೆ. ಅದನ್ನ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಹೇಳಿದ್ದು, ಇಲ್ಲಿ ಅಲ್ಲ ಎಂದರು.
ಸಿದ್ದರಾಮಯ್ಯನವರು ಹೋದ ಎಲ್ಲಾ ಸಮಾರಂಭದಲ್ಲೆಲ್ಲ ಅವರ ಅಭಿಮಾನಿಗಳು ಹೌದು ಹುಲಿಯಾ, ಹೌದು ಹುಲಿಯಾ ಎನ್ನುವ ಮೂಲಕ ಮತ್ತಷ್ಟು ಪ್ರಚಲಿತಗೊಳ್ಳುತ್ತಿದೆ.