ರಾಯಚೂರು : ಲವ್ ಕೇಸರಿ ಆರಂಭಿಸುವಂತೆ ರಾಯಚೂರು ಜಿಲ್ಲಾ ಶ್ರೀರಾಮಸೇನಾ ಸಂಚಾಲಕ ರಾಜಾಚಂದ್ರ ರಾಮನಗೌಡ ಕರೆ ನೀಡಿದ್ದಾರೆ. ನಗರದಲ್ಲಿ ನಿನ್ನೆ ಶ್ರೀರಾಮ ನವಮಿ ನಿಮಿತ್ತವಾಗಿ ಶ್ರೀರಾಮಲಿಂಗೇಶ್ವರ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಯಚೂರು ಜಿಲ್ಲೆಯಲ್ಲಿ ಎಲ್ಲಿಯೂ ಹಿಂದೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯಬಾರದು. ನಮ್ಮ ಮನೆಯ ಹೆಣ್ಣುಮಕ್ಕಳ ರಕ್ಷಣೆ ಮಾಡಬೇಕಿದೆ. ಹೀಗಾಗಿ, ಲವ್ ಕೇಸರಿಯನ್ನ ಶುರು ಮಾಡಬೇಕಿದೆ ಎಂದು ಬಹಿರಂಗ ಕಾರ್ಯಕ್ರಮದಲ್ಲಿ ಕರೆ ನೀಡಿದರು. ಇದೇ ವೇಳೆ ಕಾರ್ಯಕ್ರಮದ ವೇದಿಕೆಯ ಮೇಲೆಯೇ ತಲ್ವಾರ್ ಪ್ರದರ್ಶನ ಮಾಡಿದರು.
ಓದಿ: ನಾನು ಪಕ್ಷ ಬಿಟ್ಟಿಲ್ಲ, ಶಕ್ತಿ ಪ್ರದರ್ಶನವನ್ನೂ ಮಾಡುತ್ತಿಲ್ಲ.. ಇದು ನೀರಿಗಾಗಿ ರ್ಯಾಲಿ ಅಷ್ಟೇ.. ಎಸ್ ಆರ್ ಪಾಟೀಲ್