ರಾಯಚೂರು: ತುಂಗಾ ತೀರದಲ್ಲಿ ನೆಲೆಸಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 399ನೇ ಪಟ್ಟಾಭಿಷೇಕ ಹಾಗೂ 425ನೇ ವರ್ಧತೋತ್ಸವ ನಿಮಿತ್ತ ಗುರುವೈಭೋತ್ಸವಕ್ಕೆ ಇಂದು ವಿದ್ಯುಕ್ತವಾಗಿ ತೆರ ಬೀಳಲಿದೆ.
ವರ್ಧತೋತ್ಸವದ ಕೊನೆಯ ದಿನವಾದ ಇಂದು ತಿರುಪತಿ ತಿರುಮಲ ದೇವಾಲಯದಿಂದ ಬಂದ ಶೇಷ ವಸ್ತ್ರವನ್ನ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಮಠದ ಸಂಪ್ರದಾಯದಂತೆ ಬರ ಮಾಡಿಕೊಂಡರು. ಇದಾದ ಬಳಿಕ ರಾಯರ ಮೂಲ ವೃಂದಾವನಕ್ಕೆ ಶೇಷ ವಸ್ತ್ರ ಅರ್ಪಿಸಲಾಯಿತು. ವರ್ಧತೋತ್ಸವದ ಮೂಲ ವೃಂದಾವನಕ್ಕೆ ವಿಶೇಷ ಅಭಿಷೇಕ ಮಾಡಲಾಯಿತು.
ತಮಿಳುನಾಡಿನ 400 ಜನರಿಂದ ನಾಂದಹಾರ ಕಾರ್ಯಕ್ರಮ ನಡೆಯಲಿದೆ. ಬಳಿಕ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರಿಂದ ಮೂಲ ರಾಮ ದೇವರ ಪೂಜೆ ನೆರವೇರಿಸಲಾಗಿದೆ. ರಾಯರ ಗುರುವೈಭೋತ್ಸವ ಕಣ್ಮುತುಂಬಿಕೊಳ್ಳಲು ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಸಂಜೆ ಧಾರ್ಮಿಕರ ಕಾರ್ಯಕ್ರಮಗಳು ನಡೆಯಲಿವೆ.