ETV Bharat / state

ರಾಯಚೂರಿನಲ್ಲಿ ಬೀದಿ ನಾಯಿಗಳ ದಾಳಿ.. 20ಕ್ಕೂ ಅಧಿಕ ಕುರಿಗಳ ಸಾವು - ಹನುಮನದೊಡ್ಡಿ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿ

ರಾಯಚೂರು ತಾಲೂಕಿನ ಹನುಮನದೊಡ್ಡಿ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ 20ಕ್ಕೂ ಅಧಿಕ ಕುರಿಗಳು ಮೃತಪಟ್ಟಿವೆ.

ಕುರಿಗಳು
ಕುರಿಗಳು
author img

By

Published : Apr 3, 2023, 3:50 PM IST

ರಾಯಚೂರು : ಬೀದಿ ನಾಯಿಗಳ ದಾಳಿಯಿಂದಾಗಿ 20ಕ್ಕೂ ಹೆಚ್ಚು ಕುರಿ ಹಾಗೂ ಮರಿಗಳು ಸಾವಿಗೀಡಾಗಿವೆ ಎನ್ನುವ ಆಪಾದನೆ ರಾಯಚೂರು ತಾಲೂಕಿನ ಹನುಮನದೊಡ್ಡಿ ಗ್ರಾಮಸ್ಥರಿಂದ ಕೇಳಿ ಬಂದಿದೆ. ಹನುಮನದೊಡ್ಡಿ ಹೊರವಲಯದ ತಾಯಪ್ಪ ಎನ್ನುವವರ ಹೊಲದಲ್ಲಿ 20ಕ್ಕೂ ಹೆಚ್ಚು ಕುರಿಗಳನ್ನು ಬಲೆಗೆ ಹಾಕಲಾಗಿತ್ತು. ಇದನ್ನು ನೋಡಿದ ಮೂರ್ನಾಲ್ಕು ಬೀದಿ ನಾಯಿಗಳು ಬಲೆಯೊಳಗೆ ನುಗ್ಗಿ ಕುರಿಗಳು ಹಾಗೂ ಮರಿಗಳ ರಕ್ತವನ್ನು ಹೀರಿ, ತಿಂದು ಹಾಕಿವೆ ಎನ್ನಲಾಗುತ್ತಿದೆ.

ಕುರಿಗಾಯಿ ಸೊಗಪ್ಪ ಎನ್ನುವವರಿಗೆ ಸೇರಿದ ಕುರಿಗಳು ಹಾಗೂ ಮರಿಗಳು ಎಂದು ತಿಳಿದು ಬಂದಿದ್ದು, ಘಟನೆಯಿಂದಾಗಿ ಕುರಿಗಾಹಿ ಲಕ್ಷಾಂತರ ರೂಪಾಯಿ ನಷ್ಟ ಹೊಂದಿದ್ದಾರೆ. ಕುರಿಗಳನ್ನ ಸಾಕಣೆ ಮಾಡಿಕೊಂಡು, ರೈತರ ಹೊಲದಲ್ಲಿ ಕುರಿಗಳನ್ನು ಕಟ್ಟಿ ಅದರ ಗೊಬ್ಬರವನ್ನು ಅಲ್ಲಿಯೇ ಹೊಲದಲ್ಲಿ ಹಾಕುವುದು ಹಾಗೂ‌ ಅವುಗಳ ಮಾರಾಟದಿಂದ ಬರುವ ಆದಾಯದಿಂದ‌ ಸೂಗಪ್ಪನ ಜೀವನ ನಡೆಸಲಾಗುತ್ತಿತ್ತು. ಆದರೆ ಬೀದಿ ನಾಯಿಗಳ ದಾಳಿಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಹೊಂದಿ ದಿಕ್ಕು ತೋಚದಂತಾಗಿದೆ. ಸಂಬಂಧಿಸಿದ ಇಲಾಖೆಯವರು ಸ್ಪಂದಿಸಿ, ನಷ್ಟ ಪರಿಹಾರವನ್ನು ನೀಡಬೇಕೆಂದು ಕುರಿಗಾಯಿ ಸಂಬಂಧಿ ಸುರೇಶ ಒತ್ತಾಯಿಸಿದ್ದಾರೆ.

ಬೀದಿ ನಾಯಿಗಳನ್ನು ಸೆರೆ ಹಿಡಿಯುವಂತೆ ಮನವಿ: ಗ್ರಾಮದಲ್ಲಿ ಮೂರ್ನಾಲ್ಕು ಬೀದಿ ನಾಯಿಗಳು ಇವೆ. ಈ ನಾಯಿಗಳು ಆಗಾಗ ಗ್ರಾಮದಲ್ಲಿ ಕುರಿಗಳ ಮೇಲೆ ದಾಳಿ ನಡೆಸುತ್ತಿವೆ. ಇದರಿಂದ ಕುರಿಗಳಿಗೆ ನಷ್ಟವಾಗುತ್ತಿದ್ದು, ಸಂಬಂಧಿಸಿದ ಸ್ಥಳೀಯರಿಗೆ ಬೀದಿ ನಾಯಿಗಳನ್ನು ಸೆರೆ ಹಿಡಿಯುವಂತೆ ಮನವಿ ಸಲ್ಲಿಸಲಾಗಿದೆ. ಆದರೆ, ಕ್ರಮ ಕೈಗೊಂಡಿಲ್ಲ ಎನ್ನುವ ಮಾತು ಗ್ರಾಮಸ್ಥರಿಂದ ಕೇಳಿ ಬಂದಿದೆ.

ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಬೀದಿ ನಾಯಿಗಳ ದಾಳಿ ತಪ್ಪಿಸಲು ಅಗತ್ಯ ಕ್ರಮ ಕೈಗೊಂಡು, ಈಗ ಕುರಿಗಳು ಮತ್ತು ಮರಿಗಳನ್ನು ಕಳೆದುಕೊಂಡು ಕಣ್ಣೀರು ಹಾಕುವಂತೆ ಮಾಡಿದ ಕುರಿಗಾಯಿ ನಷ್ಟಕ್ಕೆ ಪರಿಹಾರವನ್ನು ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಷಕಾರಿ ಹುಲ್ಲು ಸೇವಿಸಿ ಕುರಿ ಮೃತ : ಇನ್ನೊಂದೆಡೆ ವಿಷಕಾರಿ‌ ಹುಲ್ಲು ಸೇವಿಸಿ 34 ಕುರಿಗಳು ಮೃತಪಟ್ಟಿರುವ ಧಾರುಣ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿಯ ಒಂಟಿಹಾಳ್ ಗ್ರಾಮದಲ್ಲಿ (ಮಾರ್ಚ್​ 1-2023) ನಡೆದಿದೆ. ಸಾವನ್ನಪ್ಪಿದ ಕುರಿಗಳು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕುರಿದಾಸರಹಳ್ಳಿ ನಿವಾಸಿ ಡಿ. ಮಂಜಪ್ಪ ಎಂಬುವರಿಗೆ ಸೇರಿವೆ ಎಂದು ತಿಳಿದು ಬಂದಿದೆ. ಶನಿವಾರದ ದಿನದಂದು ಅಡಿಕೆ ತೋಟದಲ್ಲಿ ಹುಲ್ಲು ಮೇಯುವ ವೇಳೆ ವಿಚಿತ್ರ ಹುಲ್ಲು ತಿಂದು ಇದ್ದಕ್ಕಿದ್ದಂತೆ ಕುರಿಗಳು ಸಾವನ್ನಪ್ಪಿವೆ.

ವಿಷಕಾರಿ ಹುಲ್ಲು ತಿನ್ನುತ್ತಿದ್ದಂತೆ ಒಂದಾದ ಮೇಲೆ ಒಂದರಂತೆ ಸಾವನ್ನಪ್ಪಿದ ಕುರಿಗಳನ್ನು ಮಂಜಪ್ಪ ಉಳಿಸಿಕೊಳ್ಳಲು ಹರಸಾಹಸ ಪಟ್ರು ಕೂಡ ಕುರಿಗಳನ್ನು ಉಳಿಸಿಕೊಳ್ಳಲಾಗಲಿಲ್ಲ. ಇನ್ನೂ 50ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥವಾಗಿದ್ದು, ಸಕಾಲಕ್ಕೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದರಿಂದ ಅವು ಪ್ರಾಣಾಪಾಯದಿಂದ ಪಾರಾಗಿವೆ ಎಂಬುದು ತಿಳಿದು ಬಂದಿದೆ.

34 ಕುರಿಗಳನ್ನು ಕಳೆದುಕೊಂಡ ಕುರಿಗಾಹಿ ಮಂಜಪ್ಪ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಸ್ವಸ್ಥತೆಯಿಂದ ಕೂಡಿದ ಕುರಿಗಳಿಗೆ ಚಿಕಿತ್ಸೆ ಮುಂದುವರೆಸಬೇಕಾಗಿದೆ ಎಂದು ಪಶು ವೈದ್ಯರು ಕುರಿಗಾಹಿ ಮಂಜಪ್ಪಗೆ ತಿಳಿಸಿದ್ದಾರೆ.

ಇದನ್ನೂ ಓದಿ : ದಾವಣಗೆರೆ: ವಿಷಕಾರಿ‌ ಹುಲ್ಲು ಸೇವಿಸಿ 34 ಕುರಿಗಳ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.