ರಾಯಚೂರು: ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿರುವ ಹಿನ್ನಲೆಯಲ್ಲಿ ಮಳೆಗಾಗಿ ಗ್ಲೋಬಲ್ ವಿಜನ್ ಪಬ್ಲಿಕ್ ಶಾಲೆಯ ಮಕ್ಕಳು ದೇವರಿಗೆ ವಿಶೇವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ನಗರದ ಗ್ಲೋಬಲ್ ವಿಜನ್ ಪಬ್ಲಿಕ್ ಶಾಲೆಯ ಮಕ್ಕಳು ಇಂದು ಬೆಳಗ್ಗೆ ಶಿವನಿಗೆ ವಿಶೇಷ ಪೂಜೆ ನೆರವೇರಿಸಿ ಮಳೆ ಸುರಿಯಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಸತತವಾಗಿ ಜಿಲ್ಲೆಯಲ್ಲಿ ಬರಗಾಲ ಆವರಿಸಿರುವುದರಿಂದ ಜನ, ಜಾನುವಾರು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿಯಾದರೂ ವರುಣದೇವ ಧರೆಗಿಳಿಯಲಿ ಎಂದು ಮಕ್ಕಳು ಶಿವನ ಫೋಟೊ ಎದುರು ಪ್ರಾರ್ಥಿಸಿದರು. ಶಾಲೆಯ ಸಿಬ್ಬಂದಿ ಈ ಪೂಜೆಯಲ್ಲಿ ಪಾಲ್ಗೊಂಡಿದ್ದರು.