ETV Bharat / state

ಈಗಲೇ ಶಾಲೆ ಆರಂಭಿಸುವುದು ಬೇಡ: ಮಂತ್ರಾಲಯ ಶ್ರೀಗಳು

ಶಾಲೆಗೆ ಬರುವ ಮಕ್ಕಳು ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಉಪಯೋಗಿಸುವುದು‌ ಕಷ್ಟವಾಗುತ್ತದೆ. ಮಕ್ಕಳು ಆಟವಾಡುವುದು, ಬಹಳಷ್ಟು ಓಡಾಟ ಮಾಡುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಶಾಲೆ ಆರಂಭಿಸಿವುದನ್ನು ಮುಂದೂಡಬೇಕು ಎಂದು ರಾಘವೇಂದ್ರ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಹೇಳಿದರು.

mantralaya-shree
ಶ್ರೀಗಳ ಹೇಳಿಕೆ
author img

By

Published : Nov 5, 2020, 4:00 PM IST

ರಾಯಚೂರು: ಕೊರೊನಾ ಭೀತಿ ಹಿನ್ನೆಲೆ ಬಂದ್ ಮಾಡಿರುವ ಶಾಲೆಗಳನ್ನು ಈಗಲೇ ಆರಂಭಿಸುವುದು ಬೇಡ ಎಂದು ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ವಿದ್ಯಾಭ್ಯಾಸ ಎಷ್ಟು ಮುಖ್ಯವೋ ಆರೋಗ್ಯವೂ ಸಹ ಬಹಳ ಮುಖ್ಯ. ಇದೀಗ ಎರಡನೇ ಹಂತದಲ್ಲಿ ಕೊರೊನಾ ಸೋಂಕಿನ ಭೀತಿ ಎದುರಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ‌. ಹೀಗಾಗಿ ಶಾಲೆ ಆರಂಭಿಸಿವುದನ್ನು ಮುಂದೂಡಬೇಕು. ಶಾಲೆಗೆ ಬರುವ ಮಕ್ಕಳು ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಉಪಯೋಗಿಸುವುದು‌ ಕಷ್ಟವಾಗುತ್ತದೆ. ಮಕ್ಕಳು ಆಟವಾಡುವುದು, ಬಹಳಷ್ಟು ಓಡಾಟ ಮಾಡುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಇನ್ನೂ ಕೆಲ ದಿ‌ನಗಳ ಕಾಲ ಮುಂದುಡುವುದು ಸೂಕ್ತ ಎಂದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಸುಬುಧೇಂದ್ರ ತೀರ್ಥರು

ಪ್ರಸಕ್ತ ವರ್ಷದಲ್ಲಿ ತುಂಗಭದ್ರಾ ನದಿಯಲ್ಲಿ ಪುಷ್ಕರ ಬರಲಿದೆ. 2020 ನ. 20ರಿಂದ ಡಿ. 1ರವರೆಗೆ ಪುಷ್ಕರ ನಡೆಯಲಿದೆ. ನಿತ್ಯ ಸುಮಾರು 25 ಸಾವಿರ ಜನರು ಬರುವ ನಿರೀಕ್ಷೆಯಿದೆ. ಇದಕ್ಕಾಗಿ ಸ್ನಾನ ಘಟಕ, ಪ್ರಥಮ ಚಿಕಿತ್ಸೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಪುಷ್ಕರಕ್ಕೆ ಬರುವ ಭಕ್ತರು ಕೋವಿಡ್-19 ನಿಯಮಗಳನ್ನು ಪಾಲಿಸಬೇಕು ಎಂದರು.

ಕೊರೊನಾ ಲಾಕ್‌ಡೌನ್‌ನಿಂದಾಗಿ ಶ್ರೀ ಮಠಕ್ಕೆ 67 ಕೋಟಿ ರೂ. ನಷ್ಟವಾಗಿದೆ. ಈ ಆರ್ಥಿಕ ಸಂಕಷ್ಟದಲ್ಲಿ ಕಾರ್ಯಕ್ರಮಗಳನ್ನು ಮುನ್ನಡೆಸಲಾಗುತ್ತಿದೆ. ಈಗ ರಾಯರ ದರ್ಶನಕ್ಕೆ ಅವಕಾಶ ಕಲ್ಪಿಸಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗಲಿದ್ದು, ಮಠದ ಆದಾಯ ಹೆಚ್ಚಾಗಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.