ರಾಯಚೂರು: ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಪಡಿತರ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದ ಲಾರಿಯನ್ನು ಮುದಗಲ್ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಅಂಕಲಿಮಠ ಕ್ರಾಸ್ ಬಳಿ ಜಪ್ತಿ ಮಾಡಲಾಗಿದೆ.
ಲಾರಿಯಲ್ಲಿ 605 ಅಕ್ಕಿ ಚೀಲದಲ್ಲಿ ಸರಿಸುಮಾರು 296 ಕ್ವಿಂಟಾಲ್ನ, 6 ಲಕ್ಷ ಮೌಲ್ಯದ ಅಕ್ಕಿ ಜಪ್ತಿ ಮಾಡಲಾಗಿದೆ. ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೆರೆಗೆ ಪಿಎಸ್‌ಐ ಪ್ರಕಾಶ್ ಡಂಬಳ ನೇತೃತ್ವದಲ್ಲಿ ತಂಡ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಲಾರಿಯಲ್ಲಿದ್ದ ಚಾಲಕ ನಾಗೇಶ್, ವಿರುಪನಗೌಡ, ಮಣಿಕಂಠ ಎನ್ನುವರನ್ನು ಬಂಧಿಸಲಾಗಿದ್ದು, ಅಕ್ಕಿ ಸಮೇತ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಮತ್ತೆ ಪಂಜಾಬ್ನಲ್ಲಿ ಹಗಲು ದರೋಡೆ.. ಆರು ಲಕ್ಷ ಲೂಟಿ ಮಾಡಿ ಎಸ್ಕೇಪ್ ಆದ ಖದೀಮರು!