ರಾಯಚೂರು: ನಗರದಲ್ಲಿ ನಿನ್ನೆ ಸುರಿದ ಮಳೆಯಿಂದಾಗಿ ಎರಡು ಮನೆಗಳ ಮೇಲ್ಛಾವಣಿ ಕುಸಿದಿವೆ.
ನಗರದ ಮಕ್ತಲ್ ಪೇಟೆ ಬಡಾವಣೆಯ ವಾರ್ಡ್ ನಂ-25ರಲ್ಲಿ ಘಟನೆ ಸಂಭವಿಸಿದೆ. 75 ವರ್ಷ ಅಂಜನಮ್ಮ ಹಾಗೂ ಯಂಕಮ್ಮ ಎಂಬುವರಿಗೆ ಸೇರಿದ ಮನೆಗಳ ಮೇಲ್ಛಾವಣಿ ಕುಸಿದಿದ್ದು, ಮನೆಯಲ್ಲಿನ ದಿನ ಬಳಕೆ ವಸ್ತುಗಳು, ಆಹಾರ ಧಾನ್ಯಗಳು ನಾಶವಾಗಿವೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಸದ್ಯ ವಾಸಿಸಲು ನೆಲೆಯಿಲ್ಲದೆ ಪರದಾಡುವಂತಾಗಿದ್ದು, ಪರಿಹಾರ ಒದಗಿಸುವಂತೆ ಅವರು ಒತ್ತಾಯಿಸಿದ್ರು.