ರಾಯಚೂರು: ನಾರಾಯಣಪುರ ಜಲಾಶಯದ ಹೊರಹರಿವು ಹೆಚ್ಚಳವಾಗಿದ್ದು, ಜಿಲ್ಲೆಯಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ತೆರೆಯಲು ಕೃಷ್ಣಭಾಗ್ಯ ಜಲ ನಿಗಮ ಅಧಿಕಾರಿಗಳು, ಸಿಬ್ಬಂದಿ ಹರಸಾಹಸ ಪಡುತಿದ್ದಾರೆ.
ನಿನ್ನೆ ಕ್ರೇನ್ ಮೂಲಕ 9 ಗೇಟ್ಗಳನ್ನು ತೆರೆಯಲಾಗಿತ್ತು. ಇನ್ನುಳಿದ 3 ಗೇಟ್ಗಳು ತುಕ್ಕು ಹಿಡಿದ ಕಾರಣ ಗೇಟ್ ಓಪನ್ ಮಾಡಲು ಅಧಿಕಾರಿಗಳು ಹರಸಾಹಸ ಪಡುತಿದ್ದಾರೆ. ಗೇಟ್ ಓಪನ್ ಆಗದ ಹಿನ್ನೆಲೆ ಬ್ಯಾರೇಜ್ ಹಿಂಭಾಗದ ರೈತರು ಮತ್ತು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.