ರಾಯಚೂರು: ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಕೊರೊನಾ ವೈರಸ್ ಸಲುವಾಗಿ ನಿರ್ಮಿಸಿದ ಪಿಎಂ ಕೋರ್ಸ್ ನಿಧಿಗೆ ವೈಯಕ್ತಿಕವಾಗಿ 1 ಲಕ್ಷ ಸೇರಿ ಸಂಸದರ ನಿಧಿಯಿಂದ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಸಂಸದ, ಕೇಂದ್ರ ಸರ್ಕಾರ ವೈರಸ್ ತಡೆಗಟ್ಟುವಿಕೆಗೆ ಸಾಕಷ್ಟು ಶ್ರಮಿಸುತ್ತಿದೆ. ಎಲ್ಲರೂ ಕೈಲಾದ ಧನಸಹಾಯ ಮಾಡಬೇಕು ಎಂದು ಮನವಿ ಮಾಡಿದರು.