ರಾಯಚೂರು: ಈಜಲು ಕಾಲುವೆಗೆ ತೆರಳಿದ್ದ ಇಂಜಿನಿಯರ್ ನಾಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದೇವದುರ್ಗ ತಾಲೂಕಿನ ಮೂಡಲಗುಡ್ಡ ಗ್ರಾಮದ ಸಮೀಪದ ನಾರಾಯಣಪುರ ಬಲದಂಡೆಯಲ್ಲಿ ಈಜಲು ತೆರಳಿದ್ದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಶಂಕರಪುರ ಗ್ರಾಮ ನಿವಾಸಿ ದಯಾನಂದ (22) ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ಅಗ್ನಿಶಾಮಕ ದಳದ, ಪೊಲೀಸರು ಹಾಗೂ ಮೀನುಗಾರರು ಶೋಧ ಕಾರ್ಯ ನಡೆಸಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆಯ ಎಸ್.ಆರ್. ಸಂಪರ್ಕ ರಸ್ತೆ ಸರ್ವೆ ಕಾರ್ಯದಲ್ಲಿ ತೊಡಗಿದ್ದ ದಯಾನಂದ ಕಾಲುವೆಯಲ್ಲಿ ಈಜಲು ತೆರಳಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳದಲ್ಲಿ ಇಂಜಿನಿಯರ್ ಸಮವಸ್ತ್ರಗಳು ದೊರತಿದ್ದು. ಕಳೆದ ಎರಡು ಮೂರು ದಿನಗಳ ಹಿಂದೆಯೇ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.