ರಾಯಚೂರು: ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರುವಲ್ಲಿ ಶಾಲಾ ಮಕ್ಕಳೇ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಬಾಲ ಕಾರ್ಮಿಕರಿಂದ ದುಡಿಮೆ, ಅರ್ಧದಲ್ಲಿ ಶಾಲೆ ಬಿಡುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಿ ಕಾಣಬಹುದು. ಇದನ್ನು ಹೊಗಲಾಡಿಸಲು ಸರಕಾರ ಅನೇಕ ಕಾರ್ಯಕ್ರಮ ರೂಪಿಸಿದೆ. ಇದರ ಹೊರತಾಗಿಯೂ ಶಾಲೆಯಿಂದ ಅನೇಕ ಮಕ್ಕಳು ಹೊರಗುಳಿದಿದ್ದಾರೆ. ಸರಕಾರದ ಜೊತೆಗೆ ಮಕ್ಕಳ ರಕ್ಷಣೆ ಹಾಗೂ ಅವರ ಹಕ್ಕುಗಳನ್ನು ಅನುಭವಿಸಲು ಸ್ವತಃ ಮಕ್ಕಳೇ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ದೇವದುರ್ಗದ ಡಾನ್ ಬಾಸ್ಕೋ ಸಮಾಜ ಸೇವಾ ಸಂಸ್ಥೆ , ಬ್ರೆಡ್ ಸಂಸ್ಥೆ ಬೆಂಗಳೂರು ಅವರು ಅನುಷ್ಠಾನ ಮಾಡಿದ ಮಕ್ಕಳ ಹಕ್ಕುಗಳ ಶಿಕ್ಷಣ ಮತ್ತು ಜಾಗೃತಿ ಆಂದೋಲನಾ ಕ್ರೀಮ್ - 2 ಯೋಜನೆ ಕೆಲಸ ಮಾಡುತ್ತಿದೆ. ಕಳೆದ 6 ವರ್ಷಗಳಿಂದ ದೇವದುರ್ಗ,ಲಿಂಗಸುಗೂರು, ಮಾನ್ವಿ ಹಾಗೂ ರಾಯಚೂರು ತಾಲೂಕಿನ ಸರಕಾರಿ ಹಿ.ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ತರಬೇತಿ ಮತ್ತು ಮಕ್ಕಳ ಹಕ್ಕುಗಳ ಕ್ಲಬ್ ರಚನೆ ಮಾಡಲಾಗಿದೆ. ಮಕ್ಕಳ ಹಕ್ಕುಗಳ ಬಲವರ್ಧನೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ.
ದೇವದುರ್ಗ ತಾಲೂಕಿನಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಶಿಕ್ಷಣ ಉತ್ತಮ ಪಡಿಸಲು ಶಿಕ್ಷಣ ಇಲಾಖೆ ಯ ಸಹಕಾರದೊಂದಿಗೆ ಕ್ರೀಮ್ ಯೋಜನೆ ಮೂಲಕ 27 ಪರ್ಯಾಯ ಬೋಧನಾ ಕೇಂದ್ರ ಮಾಡುತಿದ್ದಾರೆ. ನವೆಂಬರ್ 20 ರಂದು ವಿಶ್ವ ಸಂಸ್ಥೆ ಮಕ್ಕಳ ಹಕ್ಕುಗಳ ಒಡಂಬಡಿಕೆಯ 30ನೇ ವರ್ಷಚರಣೆಯ ಪ್ರಯುಕ್ತ ಮಕ್ಕಳ ಬೆಳಗುಸಿರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾನ್ ಬಾಸ್ಕೋ ಸಮಾಜ ದೇವಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 18 ಸರಕಾರಿ ಶಾಲೆಗಳಿಂದ 800 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದಾರೆ.