ETV Bharat / state

ರಾಯಚೂರು ವಿದ್ಯಾರ್ಥಿನಿ ಸಾವು ಪ್ರಕರಣ: ಸಿಐಡಿ ತನಿಖೆಗೆ ಅಸಮಾಧಾನ

ವಿದ್ಯಾರ್ಥಿನಿ ಸಾವು ಪ್ರಕರಣದಲ್ಲಿ ಸಿಐಡಿ ತನಿಖೆಯ ವರದಿ ನಮಗೆ ದುಃಖ ತಂದಿದೆ. ಈ ಫಲಿತಾಂಶದ ಮೇಲೆ ನಮಗೆ ನಂಬಿಕೆಯಿಲ್ಲದ ಕಾರಣ ಮುಂದೆ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯಿಸುತ್ತೇವೆ ಎಂದು ವಿಶ್ವಕರ್ಮ ಸಮಾಜದ ಮುಖಂಡ ಮಾರುತಿ ಬಡಿಗೇರ್ ಹೇಳಿದ್ದಾರೆ.

ರಾಯಚೂರು ವಿದ್ಯಾರ್ಥಿನಿ ಸಾವು ಪ್ರಕರಣ: ಸಿಐಡಿ ತನಿಖೆಯಿಂದ ಅಸಮದಾನ
author img

By

Published : Jul 17, 2019, 5:33 PM IST

Updated : Jul 17, 2019, 6:52 PM IST

ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ಅಮಾನುಮಾನಾಸ್ಪದ ಸಾವು ಪ್ರಕರಣ ಸಂಬಂಧ ಸಿಐಡಿ ತನಿಖೆ ನಡೆಸಿ ಅದು ಕೊಲೆಯಲ್ಲ ಆತ್ಮಹತ್ಯೆ ಎಂದು ವರದಿ ನೀಡಿದ್ದು, ಈ ಬಗ್ಗೆ ವಿಶ್ವಕರ್ಮ​ ಸಮಾಜದ ಮುಖಂಡ ಮಾರುತಿ ಬಡಿಗೇರ್ ಪ್ರತಿಕ್ರಿಯಿಸಿದ್ದಾರೆ.

ರಾಯಚೂರು ವಿದ್ಯಾರ್ಥಿನಿ ಸಾವು ಪ್ರಕರಣ: ಸಿಐಡಿ ತನಿಖೆಯಿಂದ ಅಸಮದಾನ

ಈ ಬಗ್ಗೆ ಮಾತನಾಡಿದ ಮಾರುತಿ ಬಡಿಗೇರ್ ಸಿಐಡಿ ತನಿಖೆಯ ವರದಿ ನಮಗೆ ದುಃಖ ತಂದಿದೆ. ಈ ಫಲಿತಾಂಶದ ಮೇಲೆ ನಮಗೆ ನಂಬಿಕೆಯಿಲ್ಲದ ಕಾರಣ ಮುಂದೆ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯಿಸುತ್ತೇವೆಂದು ಹೇಳಿದ್ದಾರೆ.

ಈ ಹಿಂದೆ ಪ್ರಕರಣವನ್ನು ತನಿಖೆಗೆ ಎಂದು ಸಿಐಡಿಗೆ ವಹಿಸಿದಾಗ ನಮಗೆ ಸರಕಾರ ಹಾಗೂ ತನಿಖಾ ತಂಡದ ಮೇಲೆ ಭರವಸೆಯಿತ್ತು. ಆದರೆ, ಇದು ಆತ್ಮಹತ್ಯೆ ಎಂದು ವರದಿ ನೀಡಿದ್ದು, ಬೇಸರ ಮೂಡಿಸಿದೆ. ಈ ಪ್ರಕರಣದಲ್ಲಿ ರಾಜಕೀಯ ಹಾಗೂ ದೊಡ್ಡ ಉದ್ಯಮಿಗಳ ಕೈವಾಡವಿದೆ. ಅಲ್ಲದೇ ಮರಣೋತ್ತರ ವರದಿಯಲ್ಲಿ ವೈದ್ಯರ ಕೈವಾಡವೂ ಇದ್ದು, ಸದ್ಯದಲ್ಲೇ ಅದನ್ನೂ ಬಹಿರಂಗ ಪಡಿಸುತ್ತೇವೆ ಎಂದು ತಿಳಿಸಿದರು.

ಡಿ.ಕೆ.ರವಿ, ದಾನಮ್ಮ ಮತ್ತಿತರ ಪ್ರಕರಣಗಳಲ್ಲಿ ಸಿಐಡಿ ಸೂಕ್ತ ನ್ಯಾಯ ಸಮ್ಮತ ವರದಿ ನೀಡಿಲ್ಲ. ಅದೇ ರೀತಿ ಈ ಪ್ರಕರಣದಲ್ಲೂ ಆಗಿದೆ. ಇಂದು ಸಂಜೆ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಸಿಬಿಐಗೆ ವಹಿಸಲು ಒತ್ತಾಯ ಮಾಡುತ್ತೇವೆ ಎಂದರು.

ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿ ಸಮಾನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧ ಸಿಐಡಿ ತನಿಖೆ ನಡೆಸಿ ವರದಿ ನೀಡಿದ್ದು ಅದು ಕೊಲೆಯಲ್ಲ ಆತ್ಮಹತ್ಯೆ ವೆಂದು ಹೇಳಿದ್ದು ಇದರ ಬಗ್ಗೆ ಅವರ ಸಮಾಜದ ಮುಖಂಡ ಮಾರುತಿ ಬಡಿಗೇರ್ ಪ್ರತಿಕ್ರಿಯಿಸಿ ಸಿಐಡಿ ತನಿಖೆಯಿಂದ ಸಾಬಿತಾದ ಈ ವಿಷಯ ನಮಗೆ ದುಃಖ ತಂದಿದೆ ಮುಂದೆ ಸಿಬಿಐಗೆ ವಹಿಸಲು ಒತ್ತಾಯಿಸುತ್ತೇವೆಂದು ಹೇಳಿದ್ದಾರೆ.
ಈ ಹಿಂದೆ ತನುಖೆಗೆ ಸಿಐಡಿಗೆ ವಹಿಸಿದಾಗ ನಮಗೆ ಸರಕಾರ ಹಾಗೂ ತನುಖಾ ತಂಡದ ಮೇಲೆ ಭರವಸೆಯಿತ್ತು ಅದ್ರೆ ಆತ್ಮಹತ್ಯೆ ವೆಂದು ವರದಿ ನೀಡಿದ್ದು ಬೇಸರ ಮೂಡಿಸಿದೆ.
ಈ ಪ್ರಕರಣದಲ್ಲಿ ರಾಜಕೀಯ ಕೈವಾಡ ಹಾಗೂ ದೊಡ್ಡ ಉದ್ಯಮಿಗಳ ಕೈವಾಡವಿದೆ ಅಲ್ಲದೇ ಮರಣೋತ್ತರ ವರದಿಯಲ್ಲಿ ವೈದ್ಯರ ಒಬ್ಬರ ಕೈವಾಡವಿದ್ದು ಮುಂದೆ ಬಹಿರಂಗ ಪಡಿಸುತ್ತೇವೆಂದು ತಿಳಿಸಿದರು.
ಡಿ.ಕೆ.ರವಿ ,ದಾನಮ್ಮ ಮತ್ತಿತರೆ ಪ್ರಕರಣಗಳಲ್ಲಿ ಸಿಐಡಿ ಸೂಕ್ತ ನ್ಯಾಯ ಸಮ್ಮತ ವರದಿ ನೀಡಿಲ್ಲ ಅದೇ ರೀತಿ ಈ ಪ್ರಕರಣದಲ್ಲಿ ವಾಗಿದೆ. ಇಂದು ಸಂಜೆ ಸಮಾಜದ ಮುಖಂಡರೋಂದಿಗೆ ಚರ್ಚಿಸಿ ಸಿಬಿಐಗೆ ವಹಿಸಲು ಒತ್ತಾಯ ವಮಾಡುತ್ತೇವೆಂದು ಹೇಳಿದರು.
Last Updated : Jul 17, 2019, 6:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.