ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ನಿಲುವಂಜಿ ಗ್ರಾಮದ ಜನರು ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ.
ಕೃಷ್ಣ ನದಿಯಿಂದ ಸುಮಾರು ಎರಡು ಕಿಲೋ ಮೀಟರ್ ದೂರದಲ್ಲಿರುವ ಈ ಗ್ರಾಮದಲ್ಲಿ 1,500 ಜನರಿದ್ದು, ಬೇಸಿಗೆ ಬಂತು ಎಂದರೆ ನೀರಿನ ಸಮಸ್ಯೆ ಉಂಟಾಗುತ್ತದೆ. ನದಿ ತೀರದಲ್ಲಿರುವ ಈ ಗ್ರಾಮಕ್ಕೆ ಬಹು ಗ್ರಾಮದ ಕುಡಿಯುವ ನೀರಿನ ಯೋಜನೆ ರೂಪಿಸಿ, ಕೋಟ್ಯಂತರ ರೂ. ವ್ಯಯ ಮಾಡಲಾಗಿದ್ದು,ಜನರಿಗೆ ನೀರು ಮಾತ್ರ ತಲುಪುತ್ತಿಲ್ಲ.
ಸದ್ಯ, ಗ್ರಾಮದಲ್ಲಿ ಕೈಪಂಪ್ ಬೋರ್‌ವೆಲ್ ಇದ್ದು, ಅದರಲ್ಲಿ ನೀರು ಬರುತ್ತಿಲ್ಲ. ಹೀಗಾಗಿ ನಮ್ಮ ಗ್ರಾಮಕ್ಕೆ ನೀರು ಪೂರೈಸಿ ಎಂದು ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.