ETV Bharat / state

ನಾಳೆಯಿಂದ ರಾಯಚೂರು ಹಾಗೂ ಸಿಂಧನೂರು ಲಾಕ್​ಡೌನ್ - Raichur locks down one week from tomorrow

ರಾಯಚೂರು ನಗರ, ಸಿಂಧನೂರು ನಗರವನ್ನು ನಾಳೆಯಿಂದ ಒಂದು ವಾರ ಕಾಲ ಲಾಕ್​​ಡೌನ್ ಮಾಡಲಾಗಿದೆ. ಲಾಕ್​ಡೌನ್ ನಿಯಮಗಳು ಮತ್ತು ದೊರೆಯುವ ಸೇವೆಗಳು, ನಿರ್ಬಂಧಗಳು ಇಂತಿವೆ..

Raichur locks down one week from tomorrow
ರಾಯಚೂರು ಹಾಗೂ ಸಿಂಧನೂರು ಲಾಕ್​ಡೌನ್
author img

By

Published : Jul 14, 2020, 8:39 PM IST

ರಾಯಚೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿರುವ ಹಿನ್ನೆಲೆಯಲ್ಲಿ, ರಾಯಚೂರು ನಗರ, ಸಿಂಧನೂರು ನಗರವನ್ನು ನಾಳೆಯಿಂದ ಒಂದು ವಾರ ಕಾಲ ಲಾಕ್​​ಡೌನ್ ಮಾಡಲಾಗಿದೆ. ಈ ಎರಡು ನಗರಗಳನ್ನು ಹೊರತುಪಡಿಸಿ ಜಿಲ್ಲೆಯ ಉಳಿದ ಕಡೆ ಬೆಳಗ್ಗೆ 6 ಗಂಟೆಯಿಂದ 2 ಗಂಟೆಯವರೆಗೆ ವ್ಯಾಪಾರ-ವಹಿವಾಟಿಗೆ ಜಿಲ್ಲಾಡಳಿತ ಅನುಮತಿ ನೀಡಿದೆ.

ಲಾಕ್​​ಡೌನ್ ಜಾರಿಯಾಗಲಿರುವ ರಾಯಚೂರು ನಗರ, ಸಿಂಧನೂರು ನಗರದಲ್ಲಿ ಅಗತ್ಯ ವಸ್ತುಗಳು, ಅಗತ್ಯ ಸೇವೆಗಳು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರಗೆ ಅನುಮತಿ ನೀಡಲಾಗಿದೆ.

ಲಾಕ್​ಡೌನ್ ನಿಯಮಗಳು ಮತ್ತು ದೊರೆಯುವ ಸೇವೆಗಳು, ನಿರ್ಬಂಧಗಳು:

  • ಅವಶ್ಯಕ ವಸ್ತುಗಳು ಹಾಗೂ ಅಗತ್ಯ ಸೇವೆಗಳು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ಅನುಮತಿ.
  • ಔಷಧಿ ಅಂಗಡಿಗಳು, ಆಸ್ಪತ್ರೆಗಳು, ತುರ್ತು ವೈದ್ಯಕೀಯ ಸೇವೆಗಳು, ಅಗ್ನಿಶಾಮಕ ಸೇವೆಗಳು, ವಿದ್ಯುತ್, ನೀರು, ನೈರ್ಮಲ್ಯ ಸೌಲಭ್ಯ ಲಭ್ಯ
  • ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆ, ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಸ್ಥಗಿತ.
  • ತುರ್ತು, ಅವಶ್ಯಕ ವಸ್ತುಗಳು, ಸೇವೆಗಳು ಸಂಬಂಧಿಸಿದ ವಾಹನಗಳಿಗೆ ಮಾತ್ರ ನಗರ ಒಳಗಡೆ ಪ್ರದೇಶಕ್ಕೆ ಅನುಮತಿ.
  • ರಾಯಚೂರು, ಸಿಂಧನೂರು ನಗರಗಳ ವ್ಯಾಪ್ತಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಮಾತ್ರ ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಕಾರ್ಯ ನಿರ್ವಹಿಸುವುದಕ್ಕೆ ಅವಕಾಶ.
  • ನ್ಯಾಯಾಲಯಗಳು ಹಾಗೂ ನ್ಯಾಯಾಂಗ ಕೆಲಸಗಳಿಗೆ ಕಚೇರಿ, ಉಚ್ಚ ನ್ಯಾಯಾಲಯವು ಹೊರಡಿಸಿರುವ ಮಾರ್ಗಸೂಚಿ ಅನ್ವಯ ಕಾರ್ಯ ನಿರ್ವಹಿಸಲಿವೆ.
  • ಕೋವಿಡ್-19 ಗೆ ಸಂಬಂಧಿಸಿದ ಕಾರ್ಯಕ್ಕೆ ನಿಯೋಜಿಸಿದ ಎಲ್ಲಾ ಕಚೇರಿಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಗತ್ಯ ಸೇವೆಗಳು ಕಾರ್ಯ ನಿರ್ವಹಿಸಬೇಕು.
  • ಎಲ್ಲಾ ಕೃಷಿ, ತೋಟಗಾರಿಕೆ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆ.
  • ಕೃಷಿ ಯಂತ್ರೋಪಕರಣಗಳು, ಬಿಡಿ ಭಾಗಗಳು ಮತ್ತು ಅವುಗಳ ದುರಸ್ಥಿಗೆ ಸಂಬಂಧಿಸಿದ ಮಳಿಗೆಳಿಗೆ ಯಾವುದೇ ನಿರ್ಬಂಧವಿಲ್ಲ.
  • ರಸಗೊಬ್ಬರ, ಕೀಟನಾಶಕ, ಬೀಜ ತಯಾರಿಕೆ, ವಿತರಣೆ, ಚಿಲ್ಲರೆ ಮಾರಾಟಗಾರರು ವ್ಯಾಪಾರ ಚಟುವಟಿಕೆಗೆ ಅನುಮತಿ.
  • ಕಂಟೈನ್​​ಮೆಂಟ್ ವಲಯಗಳಲ್ಲಿ ಅತ್ಯಗತ್ಯ ಕಾರ್ಯಚಟುವಟಿಕೆಗಳಿಗೆ ಅವಕಾಶ.
  • ವೈದ್ಯಕೀಯ ತುರ್ತು ಸೇವೆಗಳು, ಅತ್ಯಗತ್ಯ ಸೇವೆಗಳ ಸರಕು ಮತ್ತು ಪೂರೈಕೆಯ ಹೊರತು,ಈ ವಲಯಗಳಲ್ಲಿ ಮತ್ತು ವಲಯಗಳ ಹೊರಗೆ ವ್ಯಕ್ತಿ ಚಲನೆಗೆ ಕಟ್ಟುನಿಟ್ಟಿನ ಪಾಲಿಸುವುದು.
  • 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಸಹ-ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಹಾಗೂ ಆರೋಗ್ಯ ಉದ್ದೇಶಗಳಿಗೆ ಮಾತ್ರ ಅವಕಾಶ. ಇಲ್ಲದಿದ್ದರೆ ಮನೆಯಿಂದ ಹೊರ ಬರುವಂತಿಲ್ಲ.
  • ಸರ್ಕಾರಿ ಸಾರಿಗೆ ಸಂಸ್ಥೆಗಳ ಬಸ್​​ಗಳು ರಾಯಚೂರು ಮತ್ತು ಸಿಂಧನೂರು ನಗರಸಭೆ ವ್ಯಾಪ್ತಿಗಳ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಸಂಚರಿಸಲು ಅವಕಾಶ.

ಅನ್​​ಲಾಕ್

  • ರಾಯಚೂರು ಮತ್ತು ಸಿಂಧನೂರು ನಗರಸಭೆ ವ್ಯಾಪ್ತಿಗಳ ಹೊರತು ಪಡಿಸಿ ಉಳಿದ ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲಿ ಅನ್​​ಲಾಕ್, ಬೆಳಿಗ್ಗೆ 6ಗಂಟೆಯಿಂದ 2 ಗಂಟೆಯಂತೆ ವ್ಯಾಪಾರ ವಹಿವಾಟು. ವೈದ್ಯಕೀಯ, ತುರ್ತು ಸೇವೆಗಳು, ಅವಕಾಶ.
  • ಜಿಲ್ಲಾ ಎಲ್ಲಾ ಕಲ್ಯಾಣ ಮಂಟಪಗಳು, ಶಾದಿ ಮಹಲ್ ಇನ್ನಿತರ ಸಾರ್ವಜನಿಕರು ಸೇರುವ ಕಾರ್ಯಕ್ರಮಗಳು, ಸಭಾಂಗಣಗಳನ್ನ ಲಾಕ್​​ಡೌನ್ ಅವಧಿಯವರೆಗೆ ಸಂಪೂರ್ಣವಾಗಿ ಬಂದ್.
  • ಮದುವೆ, ಶವ ಸಂಸ್ಕಾರಕ್ಕೆ ಕಾರ್ಯಕ್ಕೆ 20 ಜನರಿಗೆ ಸೇರಲು ಅವಕಾಶ.
  • ಎಲ್ಲಾ ರಾಜಕೀಯ ಚಟುವಟಿಕೆಗಳು, ಕಾರ್ಯಕ್ರಮಗಳು, ಪ್ರತಿಭಟನೆಗಳು ಲಾಕ್ ಡೌನ್ ಅವಧಿಯವರೆಗೆ ನಿಷೇಧ.
  • ರಾಜ್ಯದ ಬೇರೆ ಜಿಲ್ಲೆಗಳಿಂದ ರಾಯಚೂರು ಜಿಲ್ಲೆಗೆ ಆಗಮಿಸುವ ವ್ಯಕ್ತಿಗಳಿಗೆ 7 ದಿನಗಳ ಹೋಮ್ ಕ್ವಾರಂಟೈನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.