ETV Bharat / state

ಪಿಯು ಆಂಗ್ಲ ಭಾಷೆ ಪರೀಕ್ಷೆಗೆ ರಾಯಚೂರು ರೆಡಿ.. - PU English language test at raichur

ವಿದ್ಯಾರ್ಥಿಗಳೇ ಮಾಸ್ಕ್‌ ತರಬೇಕು. ಒಂದು ವೇಳೆ ಯಾರಾದ್ರೂ ಬಿಟ್ಟು ಬಂದ್ರೆ ಮಾತ್ರ ಮಾಸ್ಕ್ ನೀಡಲಾಗುವುದು. ಸ್ಯಾನಿಟೈಸರ್​ ವ್ಯವಸ್ಥೆ ಪರೀಕ್ಷಾ ಕೇಂದ್ರದಲ್ಲಿ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಥರ್ಮಲ್ ಸ್ಕ್ರೀನಿಂಗ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

Raichur is ready for the second PU English language test
ದ್ವಿತೀಯ ಪಿಯು ಆಂಗ್ಲ ಭಾಷಾ ಪರೀಕ್ಷೆಗೆ ಸಿದ್ಧವಾದ ರಾಯಚೂರು
author img

By

Published : Jun 17, 2020, 7:52 PM IST

ರಾಯಚೂರು: ಜೂನ್ 18ರಂದು ರಾಜ್ಯಾದ್ಯಂತ ದ್ವಿತೀಯ ಪಿಯು ಇಂಗ್ಲಿಷ್ ಭಾಷಾ ಪರೀಕ್ಷೆ ನಡೆಯಲಿದೆ. ಇದಕ್ಕಾಗಿ ಎಲ್ಲ ಕಡೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಕೆಲ ಮಾರ್ಗಸೂಚಿಗಳನ್ನು ನೀಡಿದೆ. ಇದನ್ನು ಈಗಾಗಲೇ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಅನುಸರಣೆ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಲ್ಲಯ್ಯ ಸಿ ಟಿ, ಜಿಲ್ಲೆಯಲ್ಲಿ ಒಟ್ಟು 19,397 ವಿದ್ಯಾರ್ಥಿಗಳು ನಾಳೆ ಪರೀಕ್ಷೆ ಬರೆಯಲಿದ್ದಾರೆ. ಹೊರ ರಾಜ್ಯದಿಂದ 1303 ವಿದ್ಯಾರ್ಥಿಗಳು, ಹೊರ ರಾಜ್ಯದಿಂದ 13 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ತೆಲಂಗಾಣ ಮತ್ತು ಆಂಧ್ರದಿಂದ 13 ಜನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಮುಗಿಸಿಕೊಂಡು ವಾಪಸ್ ತೆರಳುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು.

ದ್ವಿತೀಯ ಪಿಯು ಆಂಗ್ಲ ಭಾಷೆ ಪರೀಕ್ಷೆಗೆ ರಾಯಚೂರು ರೆಡಿ
ನಂತರ ಮಾತನಾಡಿದ ಅವರು, ಮೊದಲೆಲ್ಲ ದ್ವಿತೀಯ ಪಿಯು ಪರೀಕ್ಷೆಗೆ 622 ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 317 ಹೆಚ್ಚುವರಿ ಕೊಠಡಿಗಳನ್ನ ಮಾಡಿಕೊಳ್ಳಲಾಗಿದೆ. ಹೊರ ರಾಜ್ಯದ 1,303 ವಿದ್ಯಾರ್ಥಿಗಳು ಸೇರಿ ಒಟ್ಟು 19,397 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಎದುರಿಸಲಿದ್ದಾರೆ ಎಂದು ತಿಳಿಸಿದರು.
ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳೇ ಮಾಸ್ಕ್‌ ತರಬೇಕು. ಒಂದು ವೇಳೆ ಯಾರಾದ್ರೂ ಬಿಟ್ಟು ಬಂದ್ರೆ ಮಾತ್ರ ಮಾಸ್ಕ್ ನೀಡಲಾಗುವುದು. ಸ್ಯಾನಿಟೈಸರ್​ ವ್ಯವಸ್ಥೆ ಪರೀಕ್ಷಾ ಕೇಂದ್ರದಲ್ಲಿ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಥರ್ಮಲ್ ಸ್ಕ್ರೀನಿಂಗ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜೊತೆಗೆ ಈಗಾಗಲೇ ಎಲ್ಲಾ ಪರೀಕ್ಷಾ ಕೊಠಡಿಗಳನ್ನ ಸ್ಯಾನಿಟೈಸ್​​ ಮಾಡಲಾಗಿದೆ ಎಂದು ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.