ರಾಯಚೂರು : ಸೌಥ್ ಏಷ್ಯಾ ಪ್ಯಾರಾ ಗೇಮ್ಸ್, 2019ರ ಅಂತರಾಷ್ಟ್ರೀಯ ವಿಕಲಚೇತನರ ಕಬಡ್ಡಿ ಪಂದ್ಯಾವಳಿಗೆ ನಗರದ ಹೊನ್ನಪ್ಪ ಆಯ್ಕೆಯಾಗಿದ್ದು, ಜಿಲ್ಲಾಡಳಿತ ಹಾಗೂ ಸಂಘ-ಸಂಸ್ಥೆಗಳು ಆರ್ಥಿಕ ಸಹಾಯ ಮಾಡಬೇಕು ಎಂದು ಸಾಕ್ಷಾತ್ಕಾರ ಸಂಸ್ಥೆಯ ಮುಖ್ಯಸ್ಥ ವೀರೇಶ್ ಮನವಿ ಮಾಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಕಲಚೇತನರ ಕಬ್ಬಡಿ ಪಂದ್ಯಾವಳಿಯು ನೇಪಾಳದ ಕಠ್ಮಂಡುವಿನಲ್ಲಿ ಆಗಸ್ಟ್ 22ರಿಂದ 24ರವರೆಗೆ ನಡೆಯಲಿದ್ದು, ನಗರದ ಹೊನ್ನಪ್ಪ ಹಾಗೂ ಬಾಗಲಕೋಟೆ ಜಿಲ್ಲೆಯ ಶೇಖರ್ ವೈ ಕಾಕಡಕಿ ಆಯ್ಕೆಯಾಗಿದ್ದಾರೆ.
ನಗರದ ವಿಕಲಚೇತನ ಹೊನ್ನಪ್ಪ ಅವರು ಈ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದು ನಮ್ಮೆಲ್ಲರ ಹೆಮ್ಮೆಯ ವಿಚಾರ. ಈ ಕುಟುಂಬ ಆರ್ಥಿಕವಾಗಿ ಸದೃಢವಿಲ್ಲದ ಕಾರಣ ಸ್ಪರ್ಧೆಯಲ್ಲಿ ಭಾಗವಹಿಸಲು ಸುಮಾರು 48 ಸಾವಿರ ರೂ.ಗಳ ಅವಶ್ಯಕತೆಯಿದೆ. ಈ ಕುರಿತು ನಗರಸಭೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಿ ಆರ್ಥಿಕ ಸಹಾಯದ ಕುರಿತು ಚರ್ಚಿಸಲಾಗುವುದು ಎಂದರು.
ಕ್ರೀಡಾಭಿಮಾನಿಗಳು, ಸಂಘ-ಸಂಸ್ಥೆಗಳು ಆರ್ಥಿಕ ಸಹಾಯ ಮಾಡುವ ಮೂಲಕ ಕ್ರೀಡಾ ಪಟುಗಳನ್ನು ಪ್ರೋತ್ಸಾಸಬೇಕು ಎಂದು ಅವರು ತಿಳಿಸಿದರು.
ದೂರವಾಣಿ ಸಂಖ್ಯೆ: 9740313132 ಕ್ಕೆ ಕರೆಮಾಡಿ ಹೊನ್ನಪ್ಪ ಅವರನ್ನು ಸಂಪರ್ಕಿಸಬಹುದು.
ಖಾತೆ ಸಂಖ್ಯೆ : 30426238381(ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಾಯಚೂರು, ಗಂಜ್ ಸರ್ಕಲ್ ಬ್ರಾಂಚ್)
ಐಎಫ್ಎಸ್ಸಿ ಕೋಡ್: SBIN0011281