ETV Bharat / state

ರಾಯಚೂರು ವಿದ್ಯಾರ್ಥಿನಿ ಕೊಲೆ ಪ್ರಕರಣ : 33 ದಿನಗಳ ನಂತರ ಆರೋಪಿ ಪ್ರಿಯಕರ ಶವವಾಗಿ ಪತ್ತೆ - ರಾಯಚೂರು ವಿದ್ಯಾರ್ಥಿನಿ ಕೊಲೆ ಪ್ರಕರಣ

ಸೋಮವಾರ ತಾನು ಪ್ರೀತಿಸಿದ ಹುಡಗಿಯನ್ನು ಕೊಲೆ ಮಾಡಿದ ಸ್ವಲ್ಪ ದೂರದಲ್ಲಿರುವ ಪೊದೆಯಲ್ಲೇ ಈತನ ಮೃತ ದೇಹ ಸಹ ಪತ್ತೆಯಾಗಿದೆ. ಈ ಮೂಲಕ ಈ ಪ್ರೇಮ ಪ್ರಕರಣ ಸಾವಿನಲ್ಲಿ ಅಂತ್ಯಗೊಂಡಂತೆ ಆಗಿದೆ. ಸದ್ಯ ಮಸ್ಕಿ ಠಾಣೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ..

Raichur girl murder case  girl murder case  Raichur girl  accused found dead  ರಾಯಚೂರು ವಿದ್ಯಾರ್ಥಿನಿ ಕೊಲೆ ಪ್ರಕರಣ  ಆರೋಪಿ ಪ್ರಿಯಕರ ಶವವಾಗಿ ಪತ್ತೆ
ಪ್ರಿಯಕರ ಶವವಾಗಿ ಪತ್ತೆ
author img

By

Published : Mar 29, 2022, 12:37 PM IST

Updated : Mar 29, 2022, 1:38 PM IST

ರಾಯಚೂರು : ಮಸ್ಕಿ ಪಟ್ಟಣದ ಹೊರವಲಯದಲ್ಲಿ ಸಾನಬಾಳ ಕ್ರಾಸ್​ನಲ್ಲಿ ನಡೆದಿದ್ದ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿಯೋರ್ವ ಸೋಮವಾರ ಶವವಾಗಿ ಪತ್ತೆಯಾಗಿದ್ದಾನೆ. ಆರೋಪಿ ರಮೇಶ ಎಂಬಾತನ ಮೃತನಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ಫೆ.25ರಂದು ರಮೇಶ್ ತಾನು ಮನಸಾರೆ ಪ್ರೀತಿಸುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿ ಭೂಮಿಕಾಳನ್ನು ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಮಸ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ, ಇದೀಗ 33 ದಿನಗಳ ನಂತರ ತಾನು ಪ್ರೀತಿಸಿದ ಗೆಳತಿಯನ್ನು ಕೊಲೆ ಮಾಡಿದ ಸ್ಥಳದ ಸನಿಹದಲ್ಲಿ ರಮೇಶನ ಮೃತದೇಹ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಭೂಮಿಕಾ ಹಾಗೂ ರಮೇಶ ಇಬ್ಬರೂ ಸಂಬಂಧಿಕರು ಆಗಿದ್ದರು. ರಮೇಶಗೆ ವರಸೆಯಲ್ಲಿ ಭೂಮಿಕಾ ಅತ್ತೆಯ ಮಗಳು ಆಗಿದ್ದಳು. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಸುತ್ತಾಟ, ಓಡಾಟ ಸಹ ಮಾಡಿದ್ದಾರೆ. ಮುಂದೆ ಈಕೆಯನ್ನು ಮದುವೆ ಮಾಡಿಕೊಳ್ಳುವುದಿಲ್ಲ ಮತ್ತು ಭೂಮಿಕಾ ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ ಎನ್ನಲಾಗುತ್ತಿದೆ.

ಹೀಗಾಗಿ, ಆವತ್ತು ರಮೇಶ ಭೂಮಿಕಾಳನನ್ನು ನಿರ್ಜನ ಸ್ಥಳವಾಗಿರುವ ಮಸ್ಕಿ ಪಟ್ಟಣದ ಹೊರವಲಯದಲ್ಲಿ ಸಾನಬಾಳ ಕ್ರಾಸ್ ಕರೆದುಕೊಂಡು ಹೋಗಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ ಎಂದು ಆರೋಪ ಕೇಳಿ ಬಂದಿತ್ತು. ಈ ಘಟನೆ ಸಂಬಂಧಿಸಿದ್ದಂತೆ ಪೊಲೀಸರು ಸಹ ಆರೋಪಿಗಾಗಿ ಶೋಧಿಸುತ್ತಿದ್ದರು.

ಸೋಮವಾರ ತಾನು ಪ್ರೀತಿಸಿದ ಹುಡಗಿಯನ್ನು ಕೊಲೆ ಮಾಡಿದ ಸ್ವಲ್ಪ ದೂರದಲ್ಲಿರುವ ಪೊದೆಯಲ್ಲೇ ಈತನ ಮೃತ ದೇಹ ಸಹ ಪತ್ತೆಯಾಗಿದೆ. ಈ ಮೂಲಕ ಈ ಪ್ರೇಮ ಪ್ರಕರಣ ಸಾವಿನಲ್ಲಿ ಅಂತ್ಯಗೊಂಡಂತೆ ಆಗಿದೆ. ಸದ್ಯ ಮಸ್ಕಿ ಠಾಣೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿನಿಯನ್ನ ಚಾಕುವಿನಿಂದ ಇರಿದು ಕೊಂದ ಯುವಕ.. ಬೆಚ್ಚಿಬಿದ್ದ ರಾಯಚೂರು

Last Updated : Mar 29, 2022, 1:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.