ETV Bharat / state

ಬಿಸಿಲೂರಿನಲ್ಲಿ ಮುಂಗಾರು ಹಂಗಾಮಿಗೆ ಸಿದ್ಧತೆ:  ಡಿಸಿಸಿ ಬ್ಯಾಂಕ್​​ನಿಂದ ಸಾಲ ನೀಡಲು ಸಜ್ಜು

ಮುಂಗಾರು ಪೂರ್ವ ಕೃಷಿ ಕಾರ್ಯಗಳು ಈಗಾಗಲೇ ಆರಂಭವಾಗಿವೆ. ಇದರಿಂದಾಗಿ ಬಿಸಿಲೂರಿನ ರೈತರು ಸಾಲಕ್ಕಾಗಿ ಬ್ಯಾಂಕ್​ಗಳ ಮೊರೆ ಹೋಗಿದ್ದು, ಡಿಸಿಸಿ ಬ್ಯಾಂಕ್​ ಸಾಲ ನೀಡಲು ಸಜ್ಜಾಗಿದೆ.

rddc bank
ಆರ್​ಡಿಸಿಸಿ ಬ್ಯಾಂಕ್​
author img

By

Published : May 14, 2020, 7:05 PM IST

ರಾಯಚೂರು: ಜಿಲ್ಲೆಯ ರೈತರು ಕೊರೊನಾ ಭೀತಿ ನಡುವೆ ಮುಂಗಾರು ಹಂಗಾಮಿಗೆ ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕಾಗಿ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಕಾರ್ಯಗಳನ್ನು ಆರಂಭಿಸಿದ್ದಾರೆ. ಆದರೆ, ಬಿತ್ತನೆ ಕಾರ್ಯಕ್ಕೆ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಹಣದ ಅವಶ್ಯಕತೆ ಇದ್ದು, ಆರ್​​ಡಿಸಿಸಿ ಬ್ಯಾಂಕ್‌ಗೆ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದು, ಬ್ಯಾಂಕ್​​ನಿಂದ ಸಾಲ ನೀಡಲಾಗುತ್ತಿದೆ.

ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಬರುವ ಆರ್‌ಡಿಡಿಸಿ ಬ್ಯಾಂಕ್ 22 ಶಾಖೆಗಳನ್ನು ಹೊಂದಿದೆ. ಕಳೆದ ವರ್ಷ ಈ ಎರಡು ಜಿಲ್ಲೆಗಳ 76 ಸಾವಿರ‌ ರೈತರಿಗೆ 454 ಕೋಟಿ ರೂಪಾಯಿ ಬೆಳೆ ಸಾಲ ನೀಡಿತ್ತು. ಈಗ ಮುಂಗಾರು ಹಂಗಾಮು ಪ್ರಾರಂಭವಾಗುವುದರಿಂದ ಜಿಲ್ಲೆಯ ಪ್ರಸಕ್ತ ವರ್ಷದ ಬೆಳೆ ಸಾಲವನ್ನ ನೀಡಲು ಆರಂಭಿಸಲಾಗಿದೆ. ಈಗಾಗಲೇ ರೈತರು ಬ್ಯಾಂಕ್‌ಗೆ ಬಂದು ಸಾಲದ ಅರ್ಜಿಗಳನ್ನ ಸಲ್ಲಿಸುತ್ತಿದ್ದಾರೆ. ಅದರಲ್ಲಿ 2001 ರೈತರಿಗೆ 10 ಕೋಟಿ ರೂಪಾಯಿಯನ್ನ ನೀಡಲಾಗಿದೆ.

ಆರ್​ಡಿಸಿಸಿ ಬ್ಯಾಂಕ್​

ನಬಾರ್ಡ್ ಆರ್‌ಡಿಸಿಸಿ ಬ್ಯಾಂಕ್‌ಗೆ 75 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಹೊಸದಾಗಿ 20 ಸಾವಿರ ರೈತರಿಗೆ ಸಾಲ ನೀಡುವ ಕುರಿತಂತೆ ಚರ್ಚೆ ನಡೆದಿದೆ. ಒಬ್ಬ ರೈತರಿಗೆ 30 ಸಾವಿರ‌ ರೂಪಾಯಿ ಸಾಲ ನೀಡಬೇಕು ಎನ್ನುವ ನಿಯಮವಿದೆ. ಈಗ ಸಾಲದ ಮೊತ್ತವನ್ನು 50 ಸಾವಿರಕ್ಕೆ ಏರಿಸಬೇಕು ಎಂಬ ಚಿಂತನೆ ನಡೆಯುತ್ತಿದೆ. ಇದಲ್ಲದೇ ಈಗಾಗಲೇ ನಬಾರ್ಡ್​​​ನಿಂದ ಮಂಜೂರು ಮಾಡಿರುವ 75 ಕೋಟಿ ರೂಪಾಯಿ ಹಣ ಬಿಡುಗಡೆಯಾದರೆ ರಾಯಚೂರು, ಕೊಪ್ಪಳ ಜಿಲ್ಲೆಯ 20 ಸಾವಿರ ಹೊಸ ರೈತರಿಗೆ ಸಾಲ ನೀಡುವ ಕುರಿತಂತೆ ಬೋರ್ಡ್‌ನಲ್ಲಿ ತೀರ್ಮಾನಿಸಿ ಸಾಲ ನೀಡಲು ಆರಂಭಿಸುವುದಾಗಿ ಬ್ಯಾಂಕ್ ಅಧಿಕಾರಿಗಳು ಹೇಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.