ETV Bharat / state

ಕರ್ತವ್ಯಲೋಪ ಆರೋಪ: ಗುಡುದೂರಿನ ಉಪ ತಹಶೀಲ್ದಾರ್​ ಅಮಾನತು - ತಹಶೀಲ್ದಾರ್​​ ಶೃತಿ ಕೆ

ಸಿರವಾರ ತಹಶೀಲ್ದಾರ್​ ಅವರನ್ನು ನಿಂದನೆ ಮಾಡಿರುವ ಆರೋಪದಡಿ ಗುಡುದೂರಿನ ಉಪ ತಹಶೀಲ್ದಾರರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಆದೇಶ ನೀಡಿದ್ದಾರೆ.

Raichur DC suspended Gudadur tahasildar
ಗುಡುದೂರಿನ ಉಪತಹಶೀಲ್ದಾರರನ್ನು ಅಮಾನತು ಮಾಡಿದ ರಾಯಚೂರು ಡಿಸಿ
author img

By

Published : May 7, 2020, 8:20 PM IST

ರಾಯಚೂರು: ಜಿಲ್ಲೆಯ ಸಿರವಾರ ತಹಶೀಲ್ದಾರ್ ಅವರನ್ನು ನಿಂದನೆ ಮಾಡಿದ ಗುಡುದೂರಿನ ಉಪ ತಹಶೀಲ್ದಾರರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಆದೇಶ ಮಾಡಿದ್ದಾರೆ.

ಗುಡದೂರಿನ ರಾಮನಗೌಡ ಅಮಾನತುಗೊಂಡಿರುವ ಉಪ ತಹಶೀಲ್ದಾರ್ ಆಗಿದ್ದು, ಸಿರವಾರ ತಹಶೀಲ್ದಾರ್​​ ಕಚೇರಿಗೆ 2020 ಮೇ 6ರಂದು ಕುಡಿದ ಮತ್ತಿನಲ್ಲಿ ಬಂದು, ತಹಶೀಲ್ದಾರ್​​ ಶೃತಿ ಕೆ. ಅವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ.

ಜತೆಗೆ ಕೋವಿಡ್-19 ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದು, ಕರ್ತವ್ಯದಲ್ಲಿ ಲೋಪವೆಸಗಿ, ದುರ್ನಡತೆ ತೋರಿಸಿದ್ದಾರಂತೆ. ಹಾಗಾಗಿ ವಿಚಾರಣೆ ಕಾಯ್ದಿರಿಸಿ ಜಿಲ್ಲಾಧಿಕಾರಿ ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.