ETV Bharat / state

ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ.. 15ಮೆಟ್ರಿಕ್​ ಟನ್​ ಆಮ್ಲಜನಕ ಪೂರೈಕೆಗೆ ರಾಯಚೂರು ಡಿಸಿ ಮನವಿ - 15ಮೆಟ್ರಿಕ್​ ಟನ್​ ಆಮ್ಲಜನಕ ಪೂರೈಕೆಗೆ ರಾಯಚೂರು ಡಿಸಿ ಮನವಿ,

ರಾಯಚೂರು ಜಿಲ್ಲೆಗೆ ಈ ಹಿಂದೆ ಹಂಚಿಕೆ ಮಾಡಲಾಗಿದ್ದ 10.38ಎಂ.ಟಿ ಆಕ್ಸಿಜನ್​ ಬದಲಾಗಿ 15 ಮೆಟ್ರಿಕ್​ ಟನ್​ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್​ ಮನವಿ ಮಾಡಿದ್ದಾರೆ.

raichur
15 ಎಂ.ಟಿ ಆಮ್ಲಜನಕ ಪೂರೈಕೆಗೆ ರಾಯಚೂರು ಡಿಸಿ ಮನವಿ
author img

By

Published : May 8, 2021, 9:53 AM IST

ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸರ್ಕಾರಿ ಹಾಗೂ ಖಾಸಗಿ ಕೋವಿಡ್ ಆಸ್ಪತ್ರೆಗಳಿಗೆ ಸಮರ್ಪಕವಾಗಿ ಆಕ್ಸಿಜನ್ ಪೂರೈಕೆ ಹಿನ್ನೆಲೆ ಜಿಲ್ಲೆಗೆ ಹಂಚಿಕೆಯಾದ ಆಕ್ಸಿಜನ್ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್​ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಪ್ರತಿ ನಿತ್ಯ 700 ರಿಂದ 800 ಪ್ರಕರಣಗಳು ದೃಢಪಡುತ್ತಿವೆ. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಸೇರಿ ಒಟ್ಟು 29 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕಿತರ ಆಧಾರದ ಮೇಲೆ ಹಿಂದೆ ಜಿಲ್ಲೆಗೆ ಒಟ್ಟು 10.38 ಎಂ.ಟಿ ಆಮ್ಲಜನಕ ಸಂಚಿಕೆ ಮಾಡಲಾಗಿರುತ್ತದೆ. ಆದರೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಹಾಗೂ ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಒಟ್ಟು 15 ಮೆಟ್ರಿಕ್​ ಟನ್​ ಆಮ್ಲಜನಕ ಬಳಕೆಯಾಗುತ್ತಿದೆ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಸಿಲಿಂಡರ್ ಮೇಲೆ ಅವಲಂಬಿತವಾಗಿದ್ದು, ಜಿಲ್ಲೆಯ ಮೂರು ರಿಫಿಲ್ಲಿಂಗ್ ಘಟಕಗಳು ನೆರೆಯ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯ ಘಟಕಗಳ ಮೇಲೆ ಅವಲಂಬನೆಯಾಗಿವೆ.

ರಿಮ್ಸ್ ಆಸ್ಪತ್ರೆಯ 700 ಹಾಸಿಗೆಗಳಲ್ಲಿ 300, ಓಪೆಕ್​ ಆಸ್ಪತ್ರೆಯ 250 ಹಾಸಿಗೆಗಳಲ್ಲಿ 160 ಹಾಗೂ ಎಂಸಿಹೆಚ್ ಆಸ್ಪತ್ರೆಯ 400 ಹಾಸಿಗೆಗಳಲ್ಲಿ 200 ಕೊರೊನಾ ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಈ ಎಲ್ಲಾ ಆಸ್ಪತ್ರೆಗಳಿಗೆ ಅಂದಾಜು 0.5 ಎಂ.ಟಿ ಆಮ್ಲಜನಕ ಅವಶ್ಯಕತೆ ಇದೆ. ಒಟ್ಟಾರೆಯಾಗಿ ಜಿಲ್ಲೆಗೆ 20 ರಿಂದ 25 ಎಂ.ಟಿ ಆಮ್ಲಜನಕ ಬೇಡಿಕೆಯಿದ್ದು, ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಈ ಹಿಂದೆ ಜಿಲ್ಲೆಗೆ ಹಂಚಿಕೆ ಮಾಡಲಾಗಿದ್ದ 10.38ಎಂ.ಟಿ ಬದಲಾಗಿ 15 ಎಂ.ಟಿ ಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ:

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಕೈ ತಪ್ಪುವ ಆತಂಕ ಜಿಲ್ಲಾಡಳಿತಕ್ಕೆ ಎದುರಾಗಿದ್ದು, ಜಿಲ್ಲೆಯಲ್ಲಿ ಜಾರಿಯಿರುವ ಕರ್ಫ್ಯೂ ಮತ್ತಷ್ಟು ಬಿಗಿಗೊಳಿಸಲಾಗಿದೆ. ಆಸ್ಪತ್ರೆ, ಔಷಧಿ, ಪೆಟ್ರೋಲ್ ಬಂಕ್ ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ ವಹಿವಾಟಿಗೆ ಬೆಳಗ್ಗೆ 10 ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ರಾಯಚೂರು: ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ..

ಜಿಲ್ಲೆಯಲ್ಲಿ ಪ್ರತಿ ನಿತ್ಯ ಸುಮಾರು 800 ಪ್ರಕರಣಗಳು ದಾಖಲಾಗುತ್ತಿವೆ. ಈ ನಡುವೆ ಕಳೆದ ವಾರ ಅವಶ್ಯಕ ವಸ್ತುಗಳ ಖರೀದಿಗೆ 12 ವರೆಗೆ ಅವಕಾಶ ಕಲ್ಪಿಸಿದ ಸಮಯದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದರು. ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಮತ್ತಷ್ಟು ಕಟ್ಟು ನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಬೆಳಗ್ಗೆ 10 ಗಂಟೆಯ ವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದ್ದು, 10 ಗಂಟೆಯ ನಂತರ ಸಗಟು ವಾಹನ ಹೊರತುಪಡಿಸಿ ಉಳಿದೆಲ್ಲ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಿದೆ.

ಶುಕ್ರವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಅನಾವಶ್ಯಕವಾಗಿ ಸಂಚಾರ ಮಾಡುತ್ತಿದ್ದ 30ಕ್ಕೂ ಅಧಿಕ ದ್ವಿಚಕ್ರ ವಾಹನ, 10 ಆಟೋ, 5 ಕಾರುಗಳ ಸವಾರರಿಗೆ ಪೊಲೀಸರು ದಂಡ ವಿಧಿಸಿ ಅನಾವಶ್ಯಕವಾಗಿ ತಿರುಗಾಡದಂತೆ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.