ETV Bharat / state

ಭೀಕರ ಅಪಘಾತ: ಟ್ರಾಕ್ಟರ್ ಚಕ್ರಕ್ಕೆ ಸಿಲುಕಿ ಗೃಹಿಣಿ ಸಾವು

ಬೈಕ್‌ನಲ್ಲಿ ತೆರಳುವ ವೇಳೆ ಆಯತಪ್ಪಿ ಬಿದ್ದು, ಟ್ರಾಕ್ಟರ್ ಚಕ್ರಕ್ಕೆ ಸಿಲುಕಿದ ಪರಿಣಾಮ ಗೃಹಿಣಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಗೃಹಿಣಿ ಸಾವು
author img

By

Published : Sep 13, 2019, 4:51 AM IST

ರಾಯಚೂರು: ಬೈಕ್‌ನಲ್ಲಿ ತೆರಳುವ ವೇಳೆ ಆಯತಪ್ಪಿ ಬಿದ್ದು, ಟ್ರಾಕ್ಟರ್ ಚಕ್ರಕ್ಕೆ ಸಿಲುಕಿದ ಪರಿಣಾಮ ಗೃಹಿಣಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ನಗರದ ಮಾವಿನಕೆರೆ ಬಳಿಯ ಇಂದಿರಾನಗರ ಬಡಾವಣೆಯಲ್ಲಿ ದುರಂತ ಸಂಭವಿಸಿದ್ದು, ಪ್ರಿಯಾಂಕ (25) ಸ್ಥಳದಲ್ಲೆ ಸಾವನ್ನಪ್ಪಿದರೆ, ಪತಿ ನರೇಶ್ ಹಾಗೂ ಒಂದು ವರ್ಷದ ಮಗು ತ್ರಿಶಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟ್ರಾಕ್ಟರ್ ಪಕ್ಕ ಬೈಕ್ ಹಾದು ಹೋಗುತ್ತಿರುವಾಗ ಗೃಹಿಣಿ ಹೆಗಲಿಗೆ ಹಾಕಿಕೊಂಡಿದ್ದ ವ್ಯಾನಿಟಿ ಬ್ಯಾಗ್ ಟ್ರಾಕ್ಟರ್ ಮಡ್‌ಗಾರ್ಡ್​ಗೆ ಸಿಲುಕಿದೆ. ಈ ವೇಳೆ ಪ್ರಿಯಾಂಕ, ರಸ್ತೆ ಬಿದ್ದು ಟ್ರಾಕ್ಟರ್ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ಬಗ್ಗೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಸ್ಲಗ್: ಗೃಹಿಣಿ ಸಾವು
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೨-೦೯-೨೦೧೯
ಸ್ಥಳ: ರಾಯಚೂರು

ಆಂಕರ್: ಬೈಕ್‌ನಲ್ಲಿ ತೆರಳುವ ವೇಳೆ ಆಯತಪ್ಪಿ ಟ್ರಾಕ್ಟರ್ ಹಿಂಬದಿಯ ಟೈರ್ ಕೆಳಗೆ ಬಿದ್ದು ಗೃಹಣಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರಾಯಚೂರಿನ ನಡೆದಿದೆ. Body:ನಗರದ ಮಾವಿನಕೆರೆ ಬಳಿಯ ಇಂದಿರಾನಗರ ಬಡವಣೆ ಈ ದುರಂತ ಸಂಭವಿಸಿದೆ. ಪ್ರಿಯಾಂಕ (25) ಮೃತ ಗೃಹಣಿ ಎಂದು ಗುರುತಿಸಲಾಗಿದ್ದು, ಪತಿ ನರೇಶ್ ಹಾಗೂ ಒಂದು ವರ್ಷದ ಮಗು ತ್ರಿಶಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರಾಕ್ಟರ್ ಪಕ್ಕ ಬೈಕ್ ಹೋಗುತ್ತಿರುವಾಗ ಗೃಹಣಿ ಹೆಗಲಿಗೆ ಹಾಕಿಕೊಂಡಿದ್ದ ವ್ಯಾನಿಟಿ ಬ್ಯಾಗ್ ಟ್ರಾಕ್ಟರ್ ಮಡ್‌ಗಾಡ್‌ಗೆ ಸಿಕ್ಕಿಹಾಕಿಕೊಂಡು ಪ್ರಿಯಾಂಕ ಟ್ರಾಕ್ಟರ್ ಗಾಲಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. Conclusion:ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.