ರಾಯಚೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು.
ಇದೇ ಮೊದಲ ಬಾರಿಗೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಶ್ರೀಮಠದ ಸಂಪ್ರದಾಯದಂತೆ ಬರಮಾಡಿಕೊಳ್ಳಲಾಯಿತು. ಮೊದಲಿಗೆ ಗ್ರಾಮ ದೇವತೆ ಶ್ರೀಮಂಚಾಲಮ್ಮ ದೇವಿಯ ದರ್ಶನ ಪಡೆದ ಅವರು ನಂತರ ವಿಶೇಷ ಪೂಜೆ ನೆರವೇರಿಸಿದರು. ಇದಾದ ಬಳಿಕ ಶ್ರೀರಾಘವೇಂದ್ರ ಸ್ವಾಮಿ ಮೂಲಬೃಂದಾವನದ ದರ್ಶನ ಪಡೆದುಕೊಂಡು ಅಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದರು. ಮಠದ ಪೀಠಾಧಿಪತಿಗಳು ರಾಹುಲ್ ಗಾಂಧಿಗೆ ರಾಯರ ಶ್ಲೋಕ ಹೇಳಿಸಿ, ಆಶೀರ್ವದಿಸಿದರು. ಮಠದಿಂದ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಬೋಸ್ರಾಜ್ ಹಾಗು ಇತರರು ಜತೆಗಿದ್ದರು.
ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆ ಆಂಧ್ರದ ಮಂತ್ರಾಲಯಕ್ಕೆ ಆಗಮಿಸಿದ್ದು, ಇಲ್ಲಿಗೆ ಸಮೀಪದ ಹಳ್ಳಿಯೊಂದರ ಬಳಿ ವಾಸ್ತವ್ಯ ಹೂಡಲಿದ್ದಾರೆ.
ಇದನ್ನೂ ಓದಿ: ಮಂತ್ರಾಲಯಕ್ಕೆ ನವರತ್ನ ಖಚಿತ ಚಿನ್ನದ ಕವಚ ಕಾಣಿಕೆ ನೀಡಿದ ಉದ್ಯಮಿ