ಮಂತ್ರಾಲಯ(ರಾಯಚೂರು): ಕೋಟ್ಯಂತರ ಭಕ್ತರ ಆರಾಧ್ಯ ದೈವ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 349ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಅತ್ಯಂತ ಸರಳವಾಗಿ ಆರಾಧನಾ ಮಹೋತ್ಸವ ಆಚರಿಸಲಾಗುತ್ತಿದೆ. ಇಂದು ಬೆಳಗ್ಗೆ 8 ಗಂಟೆಗೆ ರಾಯರ ಪಾದುಕೆ ಪೂಜೆ. ಬೆಳಗ್ಗೆ 9:30ಕ್ಕೆ ರಾಯರ ಮಧ್ಯಾರಾಧನೆ ನಿಮಿತ್ತ ಮೂಲಬೃಂದಾವನಕ್ಕೆ ಶ್ರೀಸುಬುದೇಂಧ್ರ ತೀರ್ಥರಿಂದ ಪಂಚಾಮೃತ ಅಭಿಷೇಕ ನೆರವೇರಲಿದೆ.
ಅಭಿಷೇಕದ ಬಳಿಕ ಶ್ರೀಮಠದ ಪ್ರಖರದಲ್ಲಿ ರಥೋತ್ಸವದ ಬಳಿಕ ಮೂಲ ರಾಮದೇವರ ಪೂಜೆ. ಶ್ರೀ ರಾಘವೇಂದ್ರತೀರ್ಥ ಸ್ವಾಮಿಗಳ ಆರಾಧನಾ ಮಹೋತ್ಸವಕ್ಕೆ ಮಂಗಳವಾರ ವಿದ್ಯುಕ್ತ ಚಾಲನೆ ದೊರೆತಿದ್ದು, ಕೇವಲ ಮಂತ್ರಾಲಯ ಮಾತ್ರವಲ್ಲದೇ ರಾಜ್ಯದ ವಿವಿಧ ಶಾಖಾ ಮಠಗಳಲ್ಲೂ ಆರಾಧನಾ ಮಹೋತ್ಸವ ನಡೆಯುತ್ತಿದೆ.