ರಾಯಚೂರು: ಕಾರ್ಮಿಕರ ಚುನಾವಣೆ ನಡಸದೇ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಚಿನ್ನದ ಗಣಿ ಕಾರ್ಮಿಕರು ಏಕಾಏಕಿ ಹಟ್ಟಿಚಿನ್ನದ ಕಂಪನಿಯ ಮುಂದೆ ಪ್ರತಿಭಟನೆ ನಡೆಸಿದರು. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿರುವ ಚಿನ್ನದ ಗಣಿ ಕಂಪನಿಯ ಮುಂಭಾಗದಲ್ಲಿ ಬೆಳಗ್ಗೆ 7 ರಿಂದ 10ಗಂಟೆಯ ಶಿಫ್ಟ್ ನವರು ಕೆಲಸಕ್ಕೆ ಹೋಗದೇ ಪ್ರತಿಭಟನೆ ನಡೆಸಿದ್ದಾರೆ.
ಹಟ್ಟಿ ಚಿನ್ನದ ಕಂಪನಿ ಕಾರ್ಮಿಕರ ಚುನಾವಣೆಯನ್ನು ಈಗಾಗಲೇ ನಡೆಸಬೇಕಾಗಿತ್ತು. ಆದರೆ ಕಂಪನಿಯ ಆಡಳಿತ ಮಂಡಳಿ ವಿವಿಧ ಕಾರಣಗಳು ಹೇಳಿ ಮುಂದೂಡುತ್ತಿದೆ. ಅಲ್ಲದೇ ಕಾರ್ಮಿಕರ ಸಮಸ್ಯೆಗಳಿಗೂ ಸಹ ಕಂಪನಿ ಸ್ಪಂದಿಸುತ್ತಿಲ್ಲ ಎಂಬ ಕಾರಣಕ್ಕೆ ಕೆಲಸಕ್ಕೆ ಹೋಗದೇ ಪ್ರತಿಭಟನೆ ನಡೆಸಿದರು.
ಈ ವಿಚಾರದ ತಿಳಿದ ಕಂಪನಿಯ ಇ.ಡಿ ಪ್ರಕಾಶ್ ಬಹದ್ದೂರ್, ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ ನಿಮ್ಮ ಬೇಡಿಕೆಯನ್ನು ಮೇಲಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮಾತನಾಡಲಾಗುವುದು. ಎರಡು ದಿನಗಳ ಕಾಲ ಸಮಯ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಕಾರ್ಮಿಕರು ಎರಡು ದಿನದೊಳಗೆ ಆಡಳಿತ ಮಂಡಳಿ ಸೂಕ್ತ ನಿರ್ಧಾರ ತೆಗೆದುಕೊಂಡು ಕಾರ್ಮಿಕರ ಚುನಾವಣೆ ನಡೆಸಬೇಕು, ಇಲ್ಲದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಇದನ್ನೂ ಓದಿ: ದಾವಣಗೆರೆ: ಶಾಲೆಗೆ ಹೋಗಿದ್ದ ಶಿಕ್ಷಕ ರಸ್ತೆ ಬದಿ ಅನುಮಾನಾಸ್ಪದ ಸಾವು..!
ನಿತ್ಯ ಗಣಿಯೊಳಗೆ ವಿವಿಧ ವಿಭಾಗಗಳಲ್ಲಿ ನೂರಾರು ಕಾರ್ಮಿಕರು ಶಿಫ್ಟ್ ಪ್ರಕಾರ ಕೆಲಸಕ್ಕೆ ತೆರಳುತ್ತಾರೆ. ಆದ್ರೆ ಬೆಳಗಿನ ಜಾವದ ಪಾಳೆ ತೆರಳುವ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರಿಂದ ಇಂದಿನ ಕೆಲಸ ವಿಳಂಬವಾಯಿತು.