ETV Bharat / state

ರಾಯಚೂರಿನಲ್ಲಿ ಶಾಸಕ ಸೋಮಶೇಖರ್‌ ರೆಡ್ಡಿ ವಿರುದ್ಧ ಪ್ರತಿಭಟನೆ

author img

By

Published : Jan 5, 2020, 4:31 PM IST

ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅವಹೇಳನಾಕಾರಿ ಹೇಳಿಕೆ ಖಂಡಿಸಿ ಇಂದು ಸಂವಿಧಾನ ಹಕ್ಕುಗಳ ನಾಗರಿಕರ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿದರು.

bjp mla Somashekar reddy
ರಾಯಚೂರಿನಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಪ್ರತಿಭಟನೆ

ರಾಯಚೂರು: ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಅಲ್ಪಸಂಖ್ಯಾತರ ಕುರಿತ ಅವಹೇಳನಕಾರಿ ಹೇಳಿಕೆ ಖಂಡಿಸಿ ಅವರನ್ನು ಶಾಸಕ ಸ್ಥಾನದಿಂದ ಹಿಂಪಡೆಯಬೇಕೆಂದು ಇಂದು ಸಂವಿಧಾನ ಹಕ್ಕುಗಳ ನಾಗರಿಕರ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ರಾಯಚೂರಿನಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಪ್ರತಿಭಟನೆ..

ನಗರದ ಅಂಬೇಡ್ಕರ್ ವೃತ್ತದಲ್ಲಿ ನಾಗರಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸೇರಿ ಸೋಮಶೇಖರ್ ರೆಡ್ಡಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಅವರ ಪ್ರತಿಕೃತಿ ದಹನ ಮಾಡಲು ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ತಡೆದರು. ಬಳಿಕ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಆಗ ಪ್ರತಿಭಟನೆಯ ನೇತೃತ್ವವಹಿಸಿದ್ದ ಆರ್.ಮಾನಸಯ್ಯ, ರಾಯಚೂರು ಪೊಲೀಸರು ಶಾಸಕ ಸೋಮಶೇಖರ್ ರೆಡ್ಡಿ ವಿರುದ್ದ ಪ್ರಕರಣ ದಾಖಲಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ. ರಾಯಚೂರು ಎಸ್ಪಿ ರಾಜ್ಯ ಸರ್ಕಾರದಂತೆ ಮನುಸ್ಮೃತಿಗೆ ಒಳಗಾಗಿದ್ದಾರೆಂದು ಆರೋಪಿಸಿದರು. ನಂತರ ಮನುಸ್ಮೃತಿಯನ್ನು ದಹಿಸಿ ತಮ್ಮ ಆಕ್ರೋಶ ಹೊರಹಾಕಿದರು.

ಹಲವಾರು ಅಕ್ರಮ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈಗ ಮನುಸ್ಮೃತಿಗೆ ಒಳಗಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಖಂಡಿಸಿದರು.

Intro:ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಮುಸ್ಲಿಂಮರ ಕುರಿತು ಅವಹೇಳನಾಕಾರಿ ಹೇಳಿಕೆ ಖಂಡಿಸಿ ಅವರನ್ನು ಶಾಸಕ ಸ್ಥಾನದಿಂದ ಹಿಂಪಡೆಯಬೇಕೆಂದು ಇಂದು ಸಂವಿಧಾನ ಹಕ್ಕುಗಳ ನಾಗರಿಕರ ವೇದಿಕೆಯಿಂದ ಪ್ರತಿಭಟನೆ ನಡೆಯಿತು.

Body:ನಗರದ ಅಂಬೇಡ್ಕರ್ ವೃತ್ತದಲ್ಲಿ ನಾಗರಿಕರು,ವಿವಿಧ ಘಟನೆಗಳ ಮುಖಂಡರು ಸೇರಿ ಸೋಮಶೇಖರ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಸೋಮಶೇಖರ್ ಅವರ ಪ್ರತಿಕೃತಿ ದಹನ ಮಾಡಲು ಪ್ರತಿಭಟನಾ ಕಾರರನ್ನು ಮುಂದಾದಾಗ ಪೊಲೀಸರು ತಡೆದರು,ಇದಕ್ಕೆ ಪೊಲೀಸರ ಹಾಗೂ ಪ್ರತಿಭಟನಾ ಕಾರರ ನಡುವೆ ವಾಗ್ವಾದ ನಡೆಯಿತು.
ಇದಕ್ಕೆ ಹೋರಾಟದ ಮುಖಂಡ ಆರ್.ಮಾನಸಯ್ಯ ರಾಯಚೂರು ಪೊಲೀಸರು ಶಾಸಕ ಸೋಮ ಶೇಖರ್ ರೆಡ್ಡಿ ವಿರುದ್ದ ಪ್ರಕರಣ ದಾಖಲಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಹಾಗೂ ರಾಯಚೂರು ಎಸ್ಪಿ ರಾಜ್ಯ ಸರಕಾರದಂತೆ ಮನುಸ್ಮೃತಿಗೆ ಒಳಗಾಗಿದ್ದಾರೆಂದು ಆರೋಪಿಸಿದರು.
ನಂತರ ಮನುಸ್ಮೃತಿ ಯನ್ನು ದಹಿಸಿ ತಮ್ಮ ಆಕ್ರೋಶ ಹೊರಹಾಕಿದರು.
ಹಲವಾರು ಅಕ್ರಮ,ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈಗ ಮನುಸ್ಮೃತಿಗೆ ಒಳಗಾಗಿ ಸಂವಿಧಾನ ವಿರೋದಿ ಹೇಳಿಕೆ ನೀಡುತಿದ್ದಾರೆ ಎಂದು ಖಂಡಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ನಾಗರಿಕರು ಭಾಗವಹಿಸಿದ್ದರು.

ಬೈಟ್ ಆರ್.ಮಾನಸಯ್ಯ ಸಂವಿಧಾನ ಹಕ್ಕುಗಳ ನಾಗರಿಕ ವೇದಿಕೆಯ ಮುಖಂಡ.

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.