ETV Bharat / state

ರಾಯಚೂರಿನಲ್ಲಿ 6 ಲಕ್ಷ ಮೆಟ್ರಿಕ್ ಟನ್​ ಭತ್ತ ಉತ್ಪಾದನೆ ಸಾಧ್ಯತೆ

ಕೇಂದ್ರ ಆಹಾರ ನಿಗಮದ ಮೂಲಕ ರೈತರ ಭತ್ತವನ್ನು ಖರೀದಿಸಲು ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರಿಂದ ಖರೀದಿ ಮಾಡಿದ ಭತ್ತವನ್ನು ನೇರವಾಗಿ ಈಗಾಗಲೇ ಗುರುತಿಸಲಾದ ಅಕ್ಕಿ ಗಿರಣಿಗಳಿಗೆ ಸರಬರಾಜು ಮಾಡಲಾಗುತ್ತದೆ.

author img

By

Published : Nov 14, 2020, 3:23 PM IST

Updated : Nov 14, 2020, 3:35 PM IST

Paddy
ಭತ್ತ

ರಾಯಚೂರು: ಜಿಲ್ಲೆಯಲ್ಲಿ ಕೃಷ್ಣಾ, ತುಂಗಭದ್ರಾ ನದಿಗಳು ಹರಿಯುತ್ತಿರುವ ಪರಿಣಾಮ ಯಥೇಚ್ಚವಾಗಿ ಭತ್ತ ಬೆಳೆಯಲಾಗುತ್ತಿದ್ದು, 6 ಲಕ್ಷ ಮೆಟ್ರಿಕ್ ಟನ್​​​ವರೆಗೆ ಭತ್ತ ಉತ್ಪಾದನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜಿಲ್ಲೆ ಭತ್ತದ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.

ನಾರಾಯಣಪುರ ಬಲದಂಡೆ ಯೋಜನೆ (ಎನ್​​ಆರ್​ಬಿಸಿ), ತುಂಗಭದ್ರಾ ನದಿ (ಟಿಎಲ್​​ಬಿಸಿ) ಯೋಜನೆಯಡಿ ರೈತರು ಹೊಲಗಳಿಗೆ ನೀರು ಪೂರೈಸಲಾಗುತ್ತಿದೆ. ಈ ನೀರನ್ನೇ ನಂಬಿಕೊಂಡು ಜಿಲ್ಲೆಯ ಸಿಂಧನೂರು, ಮಾನ್ವಿ, ದೇವದುರ್ಗ, ಸಿರವಾರ, ಮಸ್ಕಿ ತಾಲೂಕಿನಲ್ಲಿ ಯಥೇಚ್ಚವಾಗಿ ಭತ್ತ ಬೆಳೆಯಲಾಗುತ್ತಿದೆ. ಆದರೆ ಭತ್ತದ ಫಸಲನ್ನು ಸಂಗ್ರಹಿಸುವುದಕ್ಕಿಂತ ಮಾರಾಟ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ.

ಕಳೆದ ವರ್ಷ 3,33,357 ಗುರಿ ಪೈಕಿ 2,59,082 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಶೇ. 77.72ರಷ್ಟು ಸಾಧನೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ 3.17 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಿದ್ದು, ಅದರಲ್ಲಿ 49,754 ಹೆಕ್ಟೇರ್​ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಇನ್ನೂ ಭತ್ತ ನಾಟಿ ಮುಂದುವರೆದಿದ್ದು, 6 ಲಕ್ಷ ಮೆಟ್ರಿಕ್ ಟನ್​​​ ಭತ್ತ ಉತ್ಪಾದನೆ ಗುರಿ ಇದೆ ಎನ್ನಲಾಗಿದೆ.

ಇದನ್ನೂ ಓದಿ...ಉತ್ತುಂಗದತ್ತ ಭತ್ತದ ಇಳುವರಿ: ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಗೆ ನಿರ್ಧಾರ..!

ಫಸಲು ಬಂದ ಬಳಿಕ ಎಪಿಎಂಸಿ ಮಾರುಕಟ್ಟೆ ಇಲ್ಲವೆ ರೈಸ್ ಮಿಲ್​​​ಗಳಿಗೆ ಮಾರುತ್ತಾರೆ. ಈ ಮೊದಲು ಬೆಲೆ ಕಡಿಮೆಯಾದರೆ ಭತ್ತವನ್ನು ದಾಸ್ತಾನು ಮಾಡುತ್ತಿದ್ದರು ಮತ್ತು ಕಡಿಮೆ ಪ್ರಮಾಣದಲ್ಲಿ ಬೆಳೆ ಬೆಳೆಯುತ್ತಿದ್ದರು. ಸದ್ಯ ಬೆಲೆ ಇಳಿದಿದ್ದು, ಬೆಂಬಲ ಬೆಲೆಗಾಗಿ ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಭತ್ತ ಉತ್ಪಾದನೆ ಕುರಿತು ಅಧಿಕಾರಿಗಳ ಮಾತು

ಬೆಂಬಲ ಬೆಲೆಗೆ ಭತ್ತ ಖರೀದಿಸಲು ನೋಂದಣಿ ಕೇಂದ್ರಗಳನ್ನು ಸರ್ಕಾರ ತೆರೆದಿದೆ. ಆದರೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಹೆಚ್ಚಿನ ದರವಿರುವಾಗ ರೈತರು ಭತ್ತ ಮಾರಾಟ ಮಾಡುತ್ತಾರೆ. ಕಳೆದ ವರ್ಷ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ಆದರೆ ಯಾವುದೇ ರೈತರು ಭತ್ತ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿಲ್ಲ ಎನ್ನುತ್ತಾರೆ ಅಧಿಕಾರಿಗಳು.

Last Updated : Nov 14, 2020, 3:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.