ETV Bharat / state

ಲಿಂಗಸುಗೂರು: ಅನಾರೋಗ್ಯದಿಂದ ವಿಚಾರಣಾಧೀನ ಕೈದಿ ಸಾವು - a prisoner died

ಲಿಂಗಸುಗೂರು ಉಪ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.

ಲಿಂಗಸುಗೂರು
lingasuguru
author img

By

Published : Aug 19, 2021, 7:28 AM IST

ಲಿಂಗಸುಗೂರು(ರಾಯಚೂರು): ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಗನನ್ನೇ ಕೊಲೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.

ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದ ಹನುಮಂತಪ್ಪ ಯಲ್ಲಪ್ಪ (63) ಮೃತಪಟ್ಟ ವ್ಯಕ್ತಿ. ಲಿಂಗಸುಗೂರು ಉಪ ಕಾರಾಗೃಹದಲ್ಲಿದ್ದ ಹನುಮಂತಪ್ಪ ಬುಧವಾರ ಅನಾರೋಗ್ಯದಿಂದ ಬಳಲಿದ್ದಾನೆ. ಕೂಡಲೇ ಆತನನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ರಸ್ತೆ ಮಧ್ಯೆ ಘಟನೆ ನಡೆದಿದೆ.

ಈ ಕುರಿತು ಉಪ ಕಾರಾಗೃಹದ ಸಹಾಯಕ ಅಧಿಕಾರಿ ಅಮರಪ್ಪ ಪೇರಿ ಲಿಂಗಸುಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಿಎಸ್ಐ ಪ್ರಕಾಶ್​ರೆಡ್ಡಿ ಡಂಬಳ ವಿಚಾರಣೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.