ರಾಯಚೂರು : ಅಂಬೇಡ್ಕರ್ ನಗರದ ಶ್ರೀ ಕಂಚು ಮಾರೆಮ್ಮ ದೇವಸ್ಥಾನದ ನೂತನ ರಥದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಕೆತ್ತಿಸಲಾಗಿದೆ.
ಸುಮಾರು 40 ಲಕ್ಷ ರೂ. ವೆಚ್ಚದ ನೂತನ ರಥದಲ್ಲಿ, ದೇವಿಯ ಚಿತ್ರದೊಂದಿಗೆ ದೇವಸ್ಥಾನ ಸಮಿತಿಯವರು ಅಂಬೇಡ್ಕರ್ ಅವರ ಭಾವಚಿತ್ರವನ್ನು ಕೆತ್ತಿಸಿದ್ದಾರೆ. ದಾಂಡೇಲಿ ಕಡೆಯಿಂದ ತೇಗದ ಮರ ತರಿಸಿಕೊಂಡು, ಜಿಲ್ಲೆಯ ಹಟ್ಟಿಯಲ್ಲಿ ನೂತನ ರಥ ನಿರ್ಮಿಸಲಾಗ್ತಿದೆ.
ಈಗಾಗಲೇ ರಥದ ನಿರ್ಮಾಣಕ್ಕೆ, ತೆರಿಗೆ ಸೇರಿ 28 ಲಕ್ಷ ರೂ. ವೆಚ್ಚ ತಗುಲಿದೆ. ಕಳೆದ ಎರಡು ವರ್ಷಗಳಿಂದ ಈ ರಥವನ್ನು ನಿರ್ಮಾಣ ಮಾಡಲಾಗ್ತಿದ್ದು, ಕೊರೊನಾ ಬಳಿಕ ಈಗ ಮತ್ತೆ ರಥ ನಿರ್ಮಾಣ ಕಾರ್ಯ ಮಾಡಲಾಗ್ತಿದೆ. ಅಂಬೇಡ್ಕರ್ ಅವರು ನಮ್ಮ ಸಮುದಾಯದ ದೇವರಿದ್ದಂತೆ ಎಂದು ದೇವಾಲಯ ಸಮಿತಿ ಮುಖ್ಯಸ್ಥ ಸಿ. ಬೋಳು ಬಂಡೆಪ್ಪ ಕಟ್ಟಿಮನಿ ಹೇಳಿದ್ದಾರೆ.