ರಾಯಚೂರು: ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ಕಾಣೆಯಾಗಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ನಗರದ ಸ್ಟೇಷನ್ ರಸ್ತೆಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಕಾಣೆಯಾಗಿದ್ದಾರೆ. ಶನಿವಾರ ಕಾಲೇಜಿಗೆ ಹೋಗುವುದಾಗಿ ನಾಲ್ವರು ವಿದ್ಯಾರ್ಥಿನಿಯರು ಮನೆಯಿಂದ ಬಂದಿದ್ದಾರೆ. ಆದರೆ ಮನೆಯಿಂದ ಬಂದವರು ಕಾಲೇಜಿಗೆ ಬಾರದೇ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದಾರೆ. ಮೂವರು ವಿದ್ಯಾರ್ಥಿನಿಯರು ಮೈನರ್ ಆಗಿದ್ದರೆ, ಒಬ್ಬರು ಮೇಜರ್ ಆಗಿದ್ದಾರೆ.
ಎರಡು ತಂಡ ರಚನೆ: ಇಬ್ಬರು ಶಕ್ತಿನಗರ ಮತ್ತು ಇನ್ನಿಬ್ಬರು ರಾಯಚೂರು ನಗರದ ವಿದ್ಯಾರ್ಥಿನಿಯಾಗಿದ್ದಾರೆ. ಕಾಣೆಯಾದ ಕುರಿತಂತೆ ವಿದ್ಯಾರ್ಥಿನಿಯರ ಪೋಷಕರಿಂದ ಮಹಿಳಾ ಠಾಣೆಗೆ ದೂರು ನೀಡಿದ್ದು, ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಬಳಿಕ ವಿದ್ಯಾರ್ಥಿನಿಯರ ಹುಡುಕಾಟಕ್ಕಾಗಿ ಎರಡು ತಂಡ ರಚನೆ ಮಾಡಲಾಗಿದೆ. ಸದರಬಜಾರ ಠಾಣೆ ಪಿಎಸ್ಐ ಹಾಗೂ ಮಹಿಳಾ ಠಾಣಾ ಪಿಎಸ್ಐ ನೇತೃತ್ವದಲ್ಲಿ ಹುಡುಕಾಟ ನಡೆದಿದೆ.
ಇನ್ನು ವಿದ್ಯಾರ್ಥಿನಿಯರ ಕುರಿತಂತೆ ಕಾಲೇಜಿನ ಪ್ರಾಚಾರ್ಯರಾದ ಚಂದ್ರಶೇಖರ್ ಅವರನ್ನು ಮಾತನಾಡಿಸಿದಾಗ, ನಮ್ಮ ಕಾಲೇಜಿನ ನಾಲ್ವರು ಯುವತಿಯರು ಕಾಣೆಯಾಗಿರುವುದು ನೋವಿನ ಸಂಗತಿಯಾಗಿದೆ. ನಾಲ್ಕು ದಿನಗಳಿಂದ ವಿದ್ಯಾರ್ಥಿನಿಯರು ಕಾಲೇಜಿಗೆ ಗೈರು ಆಗಿದ್ರು. ಮೂವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು. ಒಬ್ಬರು ಮಾತ್ರ ವಾಣಿಜ್ಯ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾರೆ.
ಕಲಿಕೆಯಲ್ಲಿ ಹಿಂದುಳಿದಿದ್ದರು: ನಾಲ್ವರು ಕಾಲೇಜು ಕ್ಯಾಂಪಸ್ ಹೊರಗಡೆಯಿಂದ ನಾಪತ್ತೆಯಾಗಿದ್ದಾರೆ. ನಮಗೆ ಜುಲೈ 23 ರಂದು ರಾತ್ರಿ ನಾಪತ್ತೆಯಾದ ವಿಷಯ ಗೊತ್ತಾಗಿದೆ. ವಿದ್ಯಾರ್ಥಿನಿಯ ಬಗ್ಗೆ ತರಗತಿ ಉಪನ್ಯಾಸಕರ ಬಗ್ಗೆ ಚರ್ಚೆ ಆಗಿದೆ. ನಾಲ್ವರು ಮೊದಲಿನಿಂದಲೂ ಸರಿಯಾಗಿ ಕಾಲೇಜಿಗೆ ಬರುತ್ತಿರಲಿಲ್ಲ. ವಿದ್ಯಾರ್ಥಿನಿಯರು ತರಗತಿಯ ಕಲಿಕೆಯಲ್ಲಿ ಹಿಂದುಳಿದಿದ್ದರು. ನಮ್ಮ ಹಾಜರಾತಿ ದಾಖಲೆ ಪ್ರಕಾರ, ನಾಲ್ಕು ದಿನಗಳಿಂದ ಗೈರಾಗಿದ್ದಾರೆ. ಈ ಬಗ್ಗೆ ಪೊಲೀಸರು ಹಾಜರಾತಿ ಪುಸ್ತಕ ಮಾಹಿತಿ ಕೇಳಿದ್ದಾರೆ. ಪೊಲೀಸರ ತನಿಖೆಗೆ ನಮ್ಮ ಸಹಕಾರ ಸಂಪೂರ್ಣವಿದೆ ಎಂದಿದ್ದಾರೆ.
ಓದಿ: ಜಾತಿಗೊಬ್ಬ ಸಿಎಂ ಮಾಡಲು ಸಾಧ್ಯವಿಲ್ಲ, ಒಕ್ಕಲಿಗರ ವಿಚಾರದಲ್ಲಿ ಲಕ್ಷ್ಮಣ ರೇಖೆ ದಾಟಬೇಡಿ: ಸಚಿವ ಆರ್. ಅಶೋಕ್