ರಾಯಚೂರು: ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 11ನೇ ತಂಡದ ಕೆ.ಎಸ್.ಐ.ಎಸ್.ಎಫ್ ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ನಡೆಯಿತು. ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಈ ಕಾರ್ಯಕ್ರಮ ಜರುಗಿತು.
ಕಳೆದ 8 ತಿಂಗಳಿನಿಂದ ತರಬೇತಿ ಪಡೆದಕೊಂಡ 100 ಪೊಲೀಸ್ ಕಾನ್ಸ್ಟೇಬಲ್ಗಳು ನಿರ್ಗಮನ ಪಥಸಂಚಲನಲ್ಲಿ ಪಾಲ್ಗೊಂಡರು. ಬಳಿಕ ಮಾತನಾಡಿದ ಬಳ್ಳಾರಿ ವಲಯದ ಐಜಿಪಿ ಎಂ. ನಂಜುಡಸ್ವಾಮಿ ಮಾತನಾಡಿ, ದಕ್ಷ ಹಾಗೂ ಪ್ರಾಮಾಣಿಕ ಸೇವೆಗೆ ಪ್ರಶಿಕ್ಷಣಾರ್ಥಿ ಪೊಲೀಸ್ ಲಾನ್ಸ್ಟೇಬಲ್ಗಳು ಕೆಲಸಕ್ಕೆ ಮುಂದಾಗಬೇಕು. ತರಬೇತಿಯಲ್ಲಿ ದೊರೆತ ಶಿಕ್ಷಣವನ್ನು ಎಂದಿಗೂ ಮರೆಯಬಾರದು. ಪ್ರತಿನಿತ್ಯ ಬೋಧನೆಯ ಪುಸ್ತಗಳನ್ನು ಓದಬೇಕು. ಪೊಲೀಸ್ ಇಲಾಖೆಯ ಯಾವುದೇ ಯೂನಿಟ್ನಲ್ಲಿ ಕೆಲಸ ಮಾಡುವುದೇ ನಮ್ಮ ಪುಣ್ಯದ ಕೆಲಸ ಎಂದುಕೊಳ್ಳಬೇಕು. ಕೇವಲ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಮೆರಿಟ್ ಪಡೆಯುವುದಲ್ಲ. ಯಾವುದೇ ಸ್ಥಳದಲ್ಲಿ, ಯಾವುದೇ ಭಾಷೆಯಲ್ಲಿ, ಯಾವುದೇ ಸಂಸ್ಕೃತಿಗೆ ಹೊಂದಿಕೊಂಡು ಕರ್ತವ್ಯ ನಿರ್ವಹಿಸುತ್ತಾರೆಯೋ ಅವರು ಮೆರಿಟ್ ಪಡೆದಾಗೆ ಎಂದು ಸಲಹೆ ನೀಡಿದರು.
ಈ ಸುದ್ದಿಯನ್ನೂ ಓದಿ : ಅಂಜನಾದ್ರಿಗೆ ಭೇಟಿ ನೀಡಿದ ಬಿ.ವೈ.ವಿಜಯೇಂದ್ರ: ನೂರಾರು ಕಾರ್ಯಕರ್ತರೊಂದಿಗೆ ಮೆಟ್ಟಿಲು ಸೇವೆ
ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯಗಳಿಸಿದ ಪೊಲೀಸ್ ಪೇದೆಗಳಿಗೆ ಸೂಕ್ತ ಬಹುಮಾನ ನೀಡುವ ಮೂಲಕ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಹೆಚ್ಚುವರಿ ಎಸ್ಪಿ ಹರಿಬಾಬು ಹಾಗೂ ಎಸ್ಪಿ ನಿಕ್ಕಂ ಪ್ರಕಾಶ್ ಹಾಗೂ ಇತರೆ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.