ರಾಯಚೂರು : ನಗರದ ಗಂಜ್ ಸರ್ಕಲ್ ಬಳಿ ಪಿಂಚಣಿಗಾಗಿ ಪೋಸ್ಟ್ ಆಫೀಸ್ ಮುಂದೆ ಜನರು ಮುಗಿಬಿದ್ದಿದ್ದರು. ತಮ್ಮ ಖಾತೆಗೆ ಜಮೆಯಾದ ವಯೋವೃದ್ಧರ ಪಿಂಚಣಿ ಪಡೆಯಲು ನೂರಾರು ಜನ ಜಮಾಯಿಸಿದ್ದರು.
ಹಣ ಪಡೆಯಲು ಬಂದವರಿಗೆ ಪೋಸ್ಟ್ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಗುರುತು ಹಾಕಿ, ಸಾಲಿನಲ್ಲಿ ನಿಲ್ಲಿಸಬೇಕಿತ್ತು. ಆದರೆ, ಅಂಚೆ ಕಚೇರಿ ಅಧಿಕಾರಿಗಳು ಇದ್ಯಾವುದನ್ನೂ ಲೆಕ್ಕಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಪೋಸ್ಟ್ ಆಫೀಸ್ ಅಧಿಕಾರಿಗಳು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿ ಸಾಲಿನಲ್ಲಿ ನಿಲ್ಲಿಸಿ ಪಿಂಚಣಿ ವಿತರಿಸಿದರು.