ETV Bharat / state

ಪೌರತ್ವ ಕಾಯ್ದೆ ಸಮರ್ಥಿಸಿಕೊಂಡ ಪೇಜಾವರ ಶ್ರೀ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಇದಕ್ಕೆ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.

Pejavara swamiji defending citizen amandment bill, ಪೌರತ್ವ ಕಾಯ್ದೆ ಸಮರ್ಥಿಸಿಕೊಂಡ ಪೇಜಾವರ ಶ್ರೀ
ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ
author img

By

Published : Dec 15, 2019, 1:29 PM IST

ರಾಯಚೂರು: ಬಾಂಗ್ಲಾದಿಂದ ವಲಸೆ ಬಂದು ಅಕ್ರಮವಾಗಿ ನೆಲೆಸಿರುವರ ಮೇಲಿನ ಕಾಳಜಿಯಿಂದ ದೇಶದಲ್ಲಿ ನೆಲೆಸಿರುವ ಮುಸ್ಲಿಂ ಬಾಂಧವರು ಹೋರಾಟ ನಡೆಸುತ್ತಿದ್ದಾರೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹೇಳಿದರು.

ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಹಲವು ದಶಕಗಳಿಂದ ವಾಸವಾಗಿರುವವರು ಪೌರತ್ವ ಕಾಯಿದೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಪೌರತ್ವ ಕಾಯಿದೆ ಬಗ್ಗೆ ವಿನಾಕಾರಣ ಗೊಂದಲ ಸೃಷ್ಠಿ ಮಾಡಲಾಗುತ್ತದೆ. ಈಶಾನ್ಯ ರಾಜ್ಯಗಳ ನಾಗರಿಕರ ಅಸ್ತಿತ್ವಕ್ಕೆ ಧಕ್ಕೆ ಬರುವ ಆತಂಕವಿದೆ. ಹೀಗಾಗಿ ಅಲ್ಲಿ ಹೋರಾಟ ಮಾಡಲಾಗುತ್ತಿದೆ. ಕೇಂದ್ರ ಸೇನೆ ಬಳಸಿ ನಿಯಂತ್ರಿಸುವ ಬದಲಾಗಿ ಅವರಿಗೆ ಕಾಯಿದೆ ಬಗ್ಗೆ ಮನವರಿಕೆ ಮಾಡಿ ಶಾಂತಿ ಪಾಲಿಸಬೇಕು ಎಂದರು.

ಹಿಂದೂಗಳಿಗೆ ಅವರದ್ದೇ ಆದ ದೇಶ ಎಂದರೆ ಅದು ಭಾರತ ಮಾತ್ರ. ಹೀಗಾಗಿ ವಲಸೆ ಬಂದಿರುವ ಹಿಂದೂಗಳಿಗೆ ಆಶ್ರಯ ನೀಡುವ ಕೇಂದ್ರದ ಉದ್ದೇಶ ಸರಿಯಾಗಿದೆ ಎಂದು ಕಾಯಿದೆಯನ್ನ ಪೇಜಾವರ ಶ್ರೀಗಳು ಸಮರ್ಥನೆ ಮಾಡಿಕೊಂಡರು.

ಬಾಂಗ್ಲಾದಿಂದ ವಲಸೆ ಬಂದವರಿಗೆ ಅನ್ಯ ರಾಜ್ಯಗಳಲ್ಲಿ ಆಶ್ರಯ ನೀಡದೇ ಪಶ್ಚಿಮ ಬಂಗಾಳದಲ್ಲೇ ಇರುವಂತೆ ನಿಯಂತ್ರಿಸಬೇಕು. ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶಿ ಮುಸ್ಲಿಮರನ್ನು ಹೊರಗಟ್ಟಲು ಪೌರತ್ವ ಕಾಯಿದೆ ಜಾರಿಗೆ ತರಲಾಗಿದೆ ಎಂದರು.

ಇದೇ ವೇಳೆ ಆಯೋಧ್ಯೆ ಟ್ರಸ್ಟ್​ ರಚನೆ ಪ್ರಕ್ರಿಯೆ ಬಗ್ಗೆ ಮಾತನಾಡಿದ ಶ್ರೀಗಳು, ಟ್ರಸ್ಟ್​ ರಚನೆ ಪ್ರಕ್ರಿಯೆಗೆ ಕೇಂದ್ರ ಚಾಲನೆ ನೀಡಿದ್ದು ಸುಪ್ರೀಂಕೋರ್ಟ್ ಸೂಚನೆಯಂತೆಯೇ ಟ್ರಸ್ಟ್ ಅದರ ಕಾಲಮಿತಿಯೊಳಗೆ ರಚನೆಯಾಗಲಿದೆ ಎಂಬ ವಿಶ್ವಾಸವಿದೆ ಎಂದರು.

Intro:ಸ್ಲಗ್: ಪೇಜಾವರ ಶ್ರೀ ಹೇಳಿಕೆ
ಫಾರ್ಮೇಟ್: ಎವಿಬಿಬಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೫-೧೨-೨೦೧೯
ಸ್ಥಳ: ರಾಯಚೂರು

ಆಂಕರ್: ದೇಶದಲ್ಲಿ ನೆಲೆಸಿರುವ ಮುಸ್ಲಿಂ ಬಾಂಧವರಿಗೆ ಬಾಂಗ್ಲಾದಿಂದ ವಲಸೆ ಬಂದು ಅಕ್ರಮವಾಗಿ ನೆಲೆಸಿರುವರ ಮೇಲಿನ ಕಾಳಜಿಯಿಂದ ಹೋರಾಟ ನಡೆಸುತ್ತಿದ್ದಾರೆ ಎಂದು ಪೇಜಾವರ ಮಠದ  ಶ್ರೀ ವಿಶೇಶ್ವರ ತೀರ್ಥರು ಹೇಳಿದ್ದಾರೆ. Body:ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ
ಹಲವು ದಶಕಗಳಿಂದ ವಾಸವಾಗಿರುವವರು
ಆತಂಕಬೇಡ ಅಗತ್ಯವಿಲ್ಲ. ಪೌರತ್ವ ಕಾಯಿದೆ  ಬಗ್ಗೆ ವಿನಾಕಾರಣ ಗೊಂದಲ ಸೃಷ್ಠಿ ಮಾಡಲಾಗುತ್ತದೆ. ಈಶಾನ್ಯ ರಾಜ್ಯಗಳ ನಾಗರಿಕರಿಗೆ ಅಸ್ತಿತ್ವಕ್ಕೆ ಧಕ್ಕೆ ಬರುವ ಆತಂಕವಿದೆ ಹೀಗಾಗಿ ಅಲ್ಲಿ ಹೋರಾಟ ಮಾಡಲಾಗುತ್ತಿದೆ. ಕೇಂದ್ರ ಸೇನೆ ಬಳಸಿ ನಿಯಂತ್ರಿಸುವ ಬದಲಾಗಿ ಅವರಿಗೆ ಕಾಯಿದೆ ಬಗ್ಗೆ ಮನವರಿಕೆ ಮಾಡಿ ಶಾಂತಿ ಪಾಲಿಸಬೇಕು.
ಹಿಂದೂಗಳಿಗೆ ಅವರದ್ದೇ ಆದ ದೇಶ ಎಂದರೆ ಅದು ಭಾರತ. ಹೀಗಾಗಿ ವಲಸೆ ಬಂದಿರುವ ಹಿಂದೂಗಳಿಗೆ ಆಶ್ರಯ ನೀಡುವ ಕೇಂದ್ರದ ಉದ್ದೇಶ ಸರಿಯಾಗಿದೆ ಎಂದು ಕಾಯಿದೆಯನ್ನ ಸಮರ್ಥನೆ ಮಾಡಿಕೊಂಡರು.
ಬಾಂಗ್ಲಾದಿಂದ ವಲಸೆ ಬಂದವರನ್ನು ಅನ್ಯ ರಾಜ್ಯಗಳಲ್ಲಿ ಆಶ್ರಯ ನೀಡದೇ ಪಶ್ಚಿಮ ಬಂಗಾಳದಲ್ಲೇ ಇರುವಂತೆ ನಿಯಂತ್ರಿಸಬೇಕು.
ಪೌರತ್ವ ಕಾಯಿದೆ ಜಾರಿಯಾಗಿರುವುದು ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶಿ ಮುಸ್ಲಿಮರನ್ನು ಹೊರಗಟ್ಟಲು ಜಾರಿಗೆ ತರಲಾಗುತ್ತಿದೆ. ಸ್ಥಳೀಯವಾಗಿರುವರಿಗೆ ಆತಂಕ  ಒಳಗಾಗುವುದು ಬೇಡ. ಆಯೋಧ್ಯೆ ಟ್ರಸ್ಟ ರಚನೆ ಪ್ರಕ್ರಿಯೆಗೆ  ಕೇಂದ್ರ ಚಾಲನೆ ನೀಡಿದ್ದು ಸುಪ್ರೀಂಕೋರ್ಟ್ ಸೂಚನೆಯಂತೆಯೇ ಟ್ರಸ್ಟ್ ಅದರ ಕಾಲಮಿತಿಯೊಳಗೆ ರಚನೆಯಾಗಲಿದೆ ಎಂಬ ವಿಶ್ವಾಸವಿದೆ ವ್ಯಕ್ತಪಡಿಸಿದ್ರು.

Conclusion:ಬೈಟ್.೧: ಶ್ರೀ‌ವಿಶೇಶ್ವರ ತೀರ್ಥರು, ಪೇಜಾವರ ಮಠ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.